ಪತ್ರಿಕಾ ಪ್ರಕಟಣೆ
ಅಂಚೆ ಇಲಾಖೆ , ಪುತ್ತೂರು ವಿಭಾಗ ಮತ್ತು ಲಯನ್ಸ್ ಕ್ಲಬ್, ಕೊಳ್ನಾಡು ಸಾಲೆತ್ತೂರು ಇವರ ಸಹಭಾಗಿತ್ವದಲ್ಲಿ ಮಂಚಿ ಉಪ ಅಂಚೆ ಕಚೇರಿಯ ಅಮೃತಮಹೊತ್ಸವದ ಅಂಗವಾಗಿ ಬ್ರಹತ್ ಆಧಾರ್ ನೋಂದಣಿ,ತಿದ್ದುಪಡಿ ಅಭಿಯಾನ ಮತ್ತು ಅಂಚೆ ಇಲಾಖೆಯ ಸೇವೆಗಳ ಮಾಹಿತಿ ಶಿಬಿರವು ದಿನಾಂಕ 27-07-2022 ಬುಧವಾರ ಮತ್ತು 28-07-2022 ಗುರುವಾರ ಸ್ಥಳ:- ಲಯನ್ಸ್ ಸೇವಾ ಮಂದಿರ ಮಂಚಿ,
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ
ಅಧ್ಯಕ್ಷತೆ:- ಡಾI ಏಂಜಲ್ ರಾಜ್ IPOs
ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ.

ಮುಖ್ಯ ಅತಿಥಿಗಳು :- ಶ್ರೀಮತಿ ಎಸ್. ಪುಷ್ಪ ಕಾಮತ್, ಅಧ್ಯಕ್ಷರು ಗ್ರಾಮ ಪಂಚಾಯತ್ ಮಂಚಿ
ಶ್ರೀ ರಘುನಾಥ ಎಂ ಎಸ್ , ಮಲಕರು ಅಂಚೆ ಕಚೇರಿ ಕಟ್ಟಡ ಮಂಚಿ
ಗೌರವ ಉಪಸ್ಥಿತಿ:-
ಡಾ ಗೋಪಾಲ ಆಚಾರ್ , ಮಂಚಿ.
ಶ್ರೀ ಜಯಪ್ರಕಾಶ್ ರೈ ಮೇ ರಾವು ಅಧ್ಯಕ್ಷರು ಲಯನ್ಸ್ ಕ್ಲಬ್ ಕೊಳ್ನಾದು ಸಾಲೆತ್ತೂರು.
ಶ್ರೀ ಲೋಕನಾಥ ಎಂ, ಸಹಾಯಕ ಅಂಚೆ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ ಜೋಡು ಮಾರ್ಗ ,
ಶ್ರೀಮತಿ ವಿಜಯಲಕ್ಷ್ಮೀ ಎಮ್ ಎಸ್ ಉಪ ಅಂಚೆ ಪಾಲಕರು ಮಂಚಿ ಸ್ವಾಗತಿಸಿದರು
ಶ್ರೀ ಲೋಕನಾಥ್ ಎಂ ಪ್ರಸ್ತಾವನೆಗೈದು ಅಂಚೆ ಇಲಾಖೆಯ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು,
ಮುಖ್ಯ ಅತಿಥಿಗಳು ಅಂಚೆ ಇಲಾಖೆ ಯ ಸೇವೆಯನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,
ಕಾರ್ಯಕ್ರಮದ ಅಧ್ಯಕ್ಷರು ಡಾI ಏಂಜಲ್ ರಾಜ್ IPOs ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗ , ಇವರು ಮಾತನಾಡಿ 75 ವರ್ಷ ತುಂಬಿದ ಮಂಚಿ ಅಂಚೆ ಕಛೇರಿಯ ಅಮೃತಮಹೊತ್ಸವದ ಈ ಸಂದರ್ಭದಲ್ಲಿ ಅಹರ್ನಿಶಿ ಸೇವಾ ಮಾಹೆ ಎಂಬ ವಾಕ್ಯದೊಂದಿಗೆ ಇನ್ನಷ್ಟು ಹೆಚ್ಚಿನ ಸೇವಾ ಸೌಲಭ್ಯಗಳು ಸಾರ್ವಜನಿಕರಿಗೆ ತಲುಪುವಂತೆ ಆಗಲಿ , ಮಂಚಿ ಅಂಚೆ ಕಚೇರಿಯು ಜನತೆಗೆ ಉತ್ತಮ ಸೇವೆಯನ್ನು ನೀಡಿದ್ದು ಪ್ರಶಂಸೆಯ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು, ಜೊತೆಗೆ ಮಂಚಿ ಉಪ ಅಂಚೆ ಕಚೇರಿಯ ನಿವೃತ್ತ ಹಿರಿಯ ಗ್ರಾಮೀಣ ಅಂಚೆ ನೌಕರರು ಆಗಿರುವ ಎಸ್.ಅನಂತ ನಾಯಕ್, ಮತ್ತು ಎಂ.ಕೆ.ಇಬ್ರಾಹಿಂ ಇವರನ್ನು ಸನ್ಮಾನಿಸಿ ಗೌರವಿಸಿ , ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ಅಭಿಲಾಷ್ ಗ್ರಾಮೀಣ ಅಂಚೆ ನೌಕರರು ಮಂಚಿ ಇವರು ಧನ್ಯವಾದ ಗೈದರು,
ರೋಹನ್ ಲೂಯಿಸ್ ಪುತ್ತೂರು ವಿಭಾಗದ ತರಬೇತುದಾರ ಕಾರ್ಯಕ್ರಮವನ್ನು ನಿರೂಪಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಶ್ರೀ ಗುರುಪ್ರಸಾದ್,
ಸಿಸ್ಟಮ್ ಅಡ್ಮಿನ್ ರಾಜೇಶ್, ಬಂಟ್ವಾಳ ಉಪ ವಿಭಾಗದ ಅಂಚೆ ಮೇಲ್ವಿಚಾರಕರು ಶ್ರೀ ದೇವರಾಜ್ ಹೆಬ್ಬಾರ್ ಮತ್ತು ಕೇಶವ ಪೊಳಲಿ , ಆಧಾರ್ ಆಪರೇಟರ್ ಆಗಿ ಶ್ರೀ ವಿಘ್ನೇಶ್ ಕುಕ್ಕುಂದೂರು, ಕೇಶವ ಅನಂತಾಡಿ, ಕಾಂತಿ ಪುಣಚ,
ಮಂಚಿ ಉಪ ಹಾಗೂ ಶಾಖಾ ಅಂಚೆ ಕಛೇರಿಯ ಸಿಬ್ಬಂದಿ ವರ್ಗದವರು , ಲಯನ್ಸ್ ಕ್ಲಬ್ ನ ಸದಸ್ಯರು , ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಅಶೋಕ್ ಬಿ , ಶಾಖಾ ಅಂಚೆ ಪಾಲಕರು ಸಾಲೆತ್ತೂರು ಇವರು ಸಂಪೂರ್ಣ ಜವಾಬ್ಧಾರಿ ವಹಿಸಿದರು ,
ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.