ಅಂಚೆ ಕಚೇರಿಯಲ್ಲಿ ಹೂಡಿಕೆ. ಭವಿಷ್ಯಕ್ಕೆ ಸಹಕಾರ ಹಾಗೂ ತೆರಿಗೆಯಲ್ಲಿ ಉಳಿತಾಯ

ಪುತ್ತೂರು:
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ನಮ್ಮ ಸುತ್ತಮುತ್ತ ಇಲಾಖೆಯಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಸೇವೆಯನ್ನು ಮನೆಯ ಬಾಗಿಲಿನ ವರೆಗೆ ಕೊಂಡೊಯ್ಯುವವ ಪ್ರಾಯಶಃ ಅಂಚೆಯಣ್ಣ ಮಾತ್ರ. “ಅಹರ್ನಿಶಾ ಸೇವಾ ಮಹೇ” ಎಂಬ ಧ್ಯೇಯ ವಾಕ್ಯದೊಂದಿಗೆ ಸಾರ್ವಜನಿಕ ಸೇವೆ ನೀಡುತ್ತಿರುವ ಅಂಚೆ ಇಲಾಖೆಯ ಪುತ್ತೂರು ವಿಭಾಗದಡಿಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಪ್ರಧಾನ / ಉಪ / ಶಾಖಾ ಅಂಚೆ ಕಛೇರಿಗಳಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಎಲ್ಲಾ ಅಂಚೆ ಬಟವಾಡೆದಾರರು ತಮ್ಮ ಸೇವೆಯನ್ನು ಇನ್ನಷ್ಟು ವಿಸ್ತಾರಗೊಳಿಸಿದ್ದಾರೆ. ಆದಾಯ ತೆರಿಗೆಯನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಖಾತೆಗಳನ್ನು ತೆರೆಯಲು ಗ್ರಾಹಕರಿಗೆ ಈಗಾಗಲೇ ವಾರ್ತಾ ಪತ್ರಿಕೆಯ ಮೂಲಕ ಕರೆಕೊಡಲಾಗಿದೆ.
ಅಂಚೆ ಬಟವಾಡೆದಾರರು ತಮ್ಮ ಬಟವಾಡೆಯ ಸಮಯದಲ್ಲಿ ಅಂಚೆ ಕಛೇರಿಯಲ್ಲಿ ಯಾವುದೇ ಖಾತೆ ತೆರೆಯಲು ಬೇಕಾದ ಅರ್ಜಿನಮೂನೆಗಳನ್ನು ಹೊಂದಿರುತ್ತಾರೆ. ಆಸಕ್ತ ಗ್ರಾಹಕರು ಪ್ರಾದೇಶಿಕ ಬಟವಾಡೆದಾರರು ತಮ್ಮ ಮನೆ ಬಾಗಿಲಿಗೆ ಬಂದಾಗ ಅಥವಾ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ತಮ್ಮ ಅಭಿಲಾಷೆಗನುಗುಣವಾಗಿ ಅಂಚೆ ಕಛೇರಿಯಲ್ಲಿ ಲಭ್ಯವಿರುವ ಖಾತೆಗಳನ್ನು ಸೂಕ್ತ ದಾಖಲೆಯನ್ನು ಒದಗಿಸುವ ಮೂಲಕ ತೆರೆಯಬಹುದಾಗಿದೆ. ಈ ಮನೆಬಾಗಿಲಲ್ಲಿ ಒದಗಿಸುವ ಸೇವೆಯನ್ನು ಗ್ರಾಹಕ ಬಂಧುಗಳು ಉಪಯೋಗಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.

Leave a Comment