ಅಂಚೆಯಣ್ಣನ ಮೂಲಕ ಅಪಘಾತ ವಿಮೆ:
ಭಾರತೀಯ ಅಂಚೆ ಇಲಾಖೆಯು ಅಂಚೆ ಜೀವ ವಿಮೆಯ ಸೇವೆಯನ್ನು ಒದಗಿಸುತ್ತಿರುವುದು ಜನಸಾಮಾನ್ಯರಿಗೂ ತಿಳಿದ ವಿಷಯವಷ್ಟೆ. ಪ್ರಸ್ತುತ ನಾವು ಪ್ರತಿ ನಿತ್ಯ ನಾನಾರೀತಿಯ ಅಪಘಾತದಿಂದ ಆಗುತ್ತಿರುವ ಸಾವಿರಾರು ಜೀವಗಳ ಸಾವು ನೋವುಗಳ ಕುರಿತು ಕೇಳುತ್ತಿದ್ದೇವೆ ಹಾಗೂ ನೋಡುತ್ತಿದ್ದೇವೆ. ಇಂತ ಆಕಸ್ಮಿಕ ಅವಘಡಗಳಿಗೆ ತುತ್ತಾಗುವ ಜನರಿಗೆ ಆರ್ಥಿಕ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು ಎರಡು ಬಗೆಯ ಅಪಘಾತ ವಿಮೆಗಳನ್ನು ಅತೀ ಕಡಿಮೆ ಪ್ರೀಮಿಯಂ ದರದಲ್ಲಿ ಅತೀ ಹೆಚ್ಚು ಮೊತ್ತದ ಹಿಂಪಡೆಯುವಿಕೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ಹೊಂದಿರುವ 18 ರಿಂದ 65 ವರ್ಷದ ಒಳಗಿನ ಪ್ರತಿ ಮಹಿಳೆ/ಪುರುಷರಿಗಾಗಿ ಪರಿಚಯಿಸುತ್ತಿದೆ. ಈ ವಿಮೆಯ ಬಗೆಗಿನ ಸಂಪೂರ್ಣ ಮಾಹಿತಿ ತಮಗಾಗಿ ಇಲ್ಲಿ ಒದಗಿಸಲಾಗಿದೆ.
ವಿಮಾ ಕಂಪನಿ : 1. ಟಾಟಾ ಎ.ಐ.ಜಿ. ಸಮೂಹ ಅಪಘಾತ ಸುರಕ್ಷಾ ವಿಮೆ
- 399 ಪ್ರೀಮಿಯಂ ದರ (ತೆರಿಗೆ ಬಳಿಕದ ) ರೂ.ಗಳಲ್ಲಿ :
ಪ್ರಮುಖ ವೈಶಿಷ್ಟಗಳು
ವಿವರಗಳು | ಮೊತ್ತ ಹಿಂಪಡೆತ (ರೂ.ಗಳಲ್ಲಿ) |
---|---|
ಅಪಘಾತದಲ್ಲಿ ಸಾವು | 10,00,000 |
ಶಾಶ್ವತ ಸಂಪೂರ್ಣ/ ಭಾಗಶಃ ಅಂಗ ವೈಕಲ್ಯ | 10,00,000 |
ಅಪಘಾತದಿಂದ ಅಂಗಾಂಗ ಭೇದನ/ಪಾರ್ಶ್ವವಾಯು | 10,00,000 |
ಒಳರೋಗಿ ವಿಭಾಗದ ಅಪಘಾತದ ವೈದ್ಯಕೀಯ ವೆಚ್ಛ | ರೂ. 60000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ. |
ಹೊರರೋಗಿ ವಿಭಾಗದ ಅಪಘಾತದ ವೈದ್ಯಕೀಯ ವೆಚ್ಛ | ರೂ. 30000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ |
ಶೈಕ್ಷಣಿಕ ಪ್ರಯೋಜನ (ಅಪಘಾತದಿಂದ ಸಾವು ಸಂಭವಿಸಿದ ಸಂದರ್ಭದಲ್ಲಿ ಮಾತ್ರ) | ವಿಮಾಮೊತ್ತದ 10% ಅಥವಾ ರೂ. 1,00,000 ಅಥವಾ ನೈಜ ಮೊತ್ತಗಳಲ್ಲಿ ಯಾವುದು ಕಡಿಮೆ |
ಆಸ್ಪತ್ರೆಯಲ್ಲಿ ದಾಖಲಾದಾಗ ದೈನಂದಿನ ಖರ್ಚಿಗಾಗಿ ನಗದು | 1000/- ಪ್ರತಿ ದಿನಕ್ಕೆ , 10 ದಿನಗಳ ವರೆಗೆ. |
ಅಪಘಾತದ ಸಂದರ್ಭದಲ್ಲಿ, ಅಪಘಾತದ ಸ್ಥಳಕ್ಕೆ ತಲುಪಲು/ಹಿಂತಿರುಗಲು ಕುಟುಂಬದವರಿಗೆ ಸಾರಿಗೆ ಪ್ರಯೋಜನಗಳು | ರೂ. 25000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ. |
ಅಂತಿಮ ಸಂಸ್ಕಾರಕ್ಕೆ ನೆರವು | ರೂ. 5000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ. |
- 299 ಪ್ರೀಮಿಯಂ ದರ (ತೆರಿಗೆ ಬಳಿಕದ ) ರೂ.ಗಳಲ್ಲಿ :
ಪ್ರಮುಖ ವೈಶಿಷ್ಟಗಳು
ವಿವರಗಳು | ಮೊತ್ತ ಹಿಂಪಡೆತ (ರೂ.ಗಳಲ್ಲಿ) |
---|---|
ಅಪಘಾತದಲ್ಲಿ ಸಾವು | 10,00,000 |
ಶಾಶ್ವತ ಸಂಪೂರ್ಣ/ ಭಾಗಶಃ ಅಂಗ ವೈಕಲ್ಯ | 10,00,000 |
ಅಪಘಾತದಿಂದ ಅಂಗಾಂಗ ಭೇದನ/ಪಾರ್ಶ್ವವಾಯು | 10,00,000 |
ಒಳರೋಗಿ ವಿಭಾಗದ ಅಪಘಾತದ ವೈದ್ಯಕೀಯ ವೆಚ್ಛ | ರೂ. 60000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ. |
ಹೊರರೋಗಿ ವಿಭಾಗದ ಅಪಘಾತದ ವೈದ್ಯಕೀಯ ವೆಚ್ಛ | ರೂ. 30000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ |
ವಿಮಾ ಕಂಪನಿ : 2. ಬಜಾಜ್ ಸಮೂಹ ಅಪಘಾತ ಸುರಕ್ಷಾ ವಿಮೆ
- 396 ಪ್ರೀಮಿಯಂ ದರ (ತೆರಿಗೆ ಬಳಿಕದ ) ರೂ.ಗಳಲ್ಲಿ :
ಪ್ರಮುಖ ವೈಶಿಷ್ಟಗಳು
ವಿವರಗಳು | ಮೊತ್ತ ಹಿಂಪಡೆತ (ರೂ.ಗಳಲ್ಲಿ) |
---|---|
ಅಪಘಾತದಲ್ಲಿ ಸಾವು | 10,00,000 |
ಶಾಶ್ವತ ಸಂಪೂರ್ಣ/ ಭಾಗಶಃ ಅಂಗ ವೈಕಲ್ಯ | 10,00,000 |
ಅಪಘಾತದಿಂದ ಅಂಗಾಂಗ ಭೇದನ/ಪಾರ್ಶ್ವವಾಯು | 10,00,000 |
ಒಳರೋಗಿ ವಿಭಾಗದ ಅಪಘಾತದ ವೈದ್ಯಕೀಯ ವೆಚ್ಛ | ರೂ. 60000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ. |
ಹೊರರೋಗಿ ವಿಭಾಗದ ಅಪಘಾತದ ವೈದ್ಯಕೀಯ ವೆಚ್ಛ | ರೂ. 30000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ |
ಶೈಕ್ಷಣಿಕ ಪ್ರಯೋಜನ (ಅಪಘಾತದಿಂದ ಸಾವು ಸಂಭವಿಸಿದ ಸಂದರ್ಭದಲ್ಲಿ ಮಾತ್ರ) | ವಿಮಾಮೊತ್ತದ 10% ಅಥವಾ ರೂ. 1,00,000 ಅಥವಾ ನೈಜ ಮೊತ್ತಗಳಲ್ಲಿ ಯಾವುದು ಕಡಿಮೆ |
ಆಸ್ಪತ್ರೆಯಲ್ಲಿ ದಾಖಲಾದಾಗ ದೈನಂದಿನ ಖರ್ಚಿಗಾಗಿ ನಗದು | 1000/- ಪ್ರತಿ ದಿನಕ್ಕೆ , 10 ದಿನಗಳ ವರೆಗೆ. |
ಅಪಘಾತದ ಸಂದರ್ಭದಲ್ಲಿ, ಅಪಘಾತದ ಸ್ಥಳಕ್ಕೆ ತಲುಪಲು/ಹಿಂತಿರುಗಲು ಕುಟುಂಬದವರಿಗೆ ಸಾರಿಗೆ ಪ್ರಯೋಜನಗಳು | ರೂ. 25000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ. |
ಅಂತಿಮ ಸಂಸ್ಕಾರಕ್ಕೆ ನೆರವು | ರೂ. 5000/- ಅಥವಾ ನೈಜ ವೆಚ್ಛ ಗಳಲ್ಲಿ ಕಡಿಮೆ ಇರುವ ಮೊತ್ತ. |
- 258 ಪ್ರೀಮಿಯಂ ದರ (ತೆರಿಗೆ ಬಳಿಕದ ) ರೂ.ಗಳಲ್ಲಿ :
ಪ್ರಮುಖ ವೈಶಿಷ್ಟಗಳು
ವಿವರಗಳು | ಮೊತ್ತ ಹಿಂಪಡೆತ (ರೂ.ಗಳಲ್ಲಿ) |
---|---|
ಆಕಸ್ಮಿಕ ಸಾವು | 10,00,000 |
ಶಾಶ್ವತ ಸಂಪೂರ್ಣ/ ಭಾಗಶಃ ಅಂಗ ವೈಕಲ್ಯ | 10,00,000 |
ನಿಬಂಧನೆಗಳು:
ಎರಡೂ ಅಪಘಾತ ವಿಮೆಗಳನ್ನು ಈ ಕೆಳಗಿನವರನ್ನು ಹೊರತುಪಡಿಸಿ ಉಳಿದವರು ಮಾಡಿಸಬಹುದು.
ಹಾಗೆಯೇ, ಚಾಲಕ ವೃತ್ತಿ ನಿರ್ವಹಿಸುತ್ತಿರುವವರು, ಕಟ್ಟಡ ಕಾರ್ಮಿಕರು, ಎಲೆಕ್ಟ್ರೀಶಿಯನ್ಸ್ ಟಾಟಾ ಎ. ಐ. ಜಿ.(TATA AIG)ವಿಮೆಯನ್ನು ಮಾಡಲು ಅವಕಾಶವಿಲ್ಲ ಆದರೆ ಬಜಾಜ್ ಅಲಿಯನ್ಸ್ (Bajaj Allianz) ಸಮೂಹ ಅಪಘಾತ ಸುರಕ್ಷಾ ವಿಮೆಯನ್ನು ಮಾಡಿಸಬಹುದು.
ಮೇಲೆ ಉಲ್ಲೇಖಿಸಿದ ವಿಮಾ ಪಾಲಿಸಿಗಳನ್ನು ತಮ್ಮ ಹತ್ತಿರದ ಅಂಚೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಚೆಯಣ್ಣನಲ್ಲಿಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ತೆರೆಯುವುದರ ಮೂಲಕ ಸುಲಭದಲ್ಲಿ ಮಾಡಿಸಬಹುದಾಗಿದೆ. ವಿಮೆಯನ್ನು ಮಾಡಿಸಿದ ನಂತರ ಪಾಲಿಸಿಯ ವಿವರಗಳನ್ನು ನೋಂದಾಯಿತ ಇ-ಮೇಲ್ ಮೂಲಕ ಪಡೆಯಬಹುದಾಗಿದೆ. ಈ ವಿಮೆಯು ಒಂದು ವರ್ಷದ ಅವಧಿಯದ್ದಾಗಿರುತ್ತದೆ. ಕಡಿಮೆ ಪ್ರೀಮಿಯಂ ನಲ್ಲಿ ಹೆಚ್ಚು ಮೊತ್ತವನ್ನು ಹಿಂಪಡೆಯಬಹುದಾದ, ಸರಳ ವಿಧಾನದ, ಕಾಗದ ರಹಿತವಾದ, ಅತೀ ಕಡಿಮೆ ಅವಧಿಯಲ್ಲಿ ಮಾಡಿಸಬಹುದಾದ ಈ ವಿಮೆಯನ್ನು ಮಾಡಿಸಿಕೊಳ್ಳುವುದರ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಈ ಮೂಲಕ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಕೆಳಗೆ ನಮೂದಿಸಿರುವ ಮೊಬೈಲ್ ಸಂಖ್ಯೆಯನ್ನು / ಇ-ಮೇಲ್ ನ್ನು ಸಂಪರ್ಕಿಸಿ.
Ippb0245@ippbonline.in, 8095664411/ 8660320501/ 8073246972