ಜೈನ ತೀರ್ಥಂಕರರ ಮೋಕ್ಷ ಭೂಮಿಯ ಚಿತ್ರಿತ ಪೋಸ್ಟ್ ಕಾರ್ಡ್

ಪುತ್ತೂರು:
ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಶ್ರೀ ಕ್ಷೇತ್ರ ವರಂಗ ಜೈನ್ ಮಠ ಇವರ ಸಹಯೋಗದೊಂದಿಗೆ “ಜೈನ ತೀರ್ಥಂಕರರ ಮೋಕ್ಷ ಭೂಮಿ” ಎಂಬ ಚಿತ್ರಿತ ಪೋಸ್ಟ್ ಕಾರ್ಡ್ ನ್ನು ದಿನಾಂಕ 24.01.2023 ರಂದು ಹಿರಿಯ ಅಂಚೆ ಅಧೀಕ್ಷಕರಾದ ಡಾ. ಏಂಜಲ್ ರಾಜ್ (ಐ.ಪಿ.ಒ.ಎಸ್) ಇವರ ಮೂಲಕ ಅನಾವರಣಗೊಳಿಸಿತು.
ಈ ಚಿತ್ರಿತ ಪೋಸ್ಟ್ ಕಾರ್ಡುಗಳು ಜೈನ ಧರ್ಮದ ಎಲ್ಲಾ 24 ಜೈನ ತೀರ್ಥಂಕರರ ಹೆಸರನ್ನು ಹೊಂದಿದ್ದು, ಅವರು ಮೋಕ್ಷಹೊಂದಿದ ಸ್ಥಳದ ಚಿತ್ರವನ್ನೊಳಗೊಂಡಿದೆ. ಈ ಅಂಚೆ ಕಾರ್ಡಿನಲ್ಲಿ ಕ್ಯೂ ಆರ್ ಕೋಡ್ ಲಭ್ಯವಿದ್ದು, ಸ್ಕ್ಯಾನ್ ಮಾಡುವುದರ ಮೂಲಕ ಸಂಬಂಧಿತ ತೀರ್ಥಂಕರರ ಸಂಪೂರ್ಣ ವಿವರಣೆಯನ್ನು ಪಡೆಯಬಹುದಾಗಿದೆ. ಅಂಚೆ ಚೀಟಿ ಸಂಗ್ರಹಣಾಕಾರರು ಮತ್ತು ತತ್ಸಮಾನ ಮನೋಧರ್ಮದವರು ಈ ಅಂಚೆ ಕಾರ್ಡುಗಳನ್ನು ಪುತ್ತೂರು ಪ್ರಧಾನ ಅಂಚೆ ಕಛೇರಿ, ಕಾರ್ಕಳ ಪ್ರಧಾನ ಅಂಚೆ ಕಛೇರಿ, ಮಂಗಳೂರು ಪ್ರಧಾನ ಅಂಚೆ ಕಛೇರಿ ಹಾಗೂ ಬೆಂಗಳೂರು ಜನರಲ್ ಪೋಸ್ಟ್ ಆಫೀಸ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ ಈ ಎಲ್ಲಾ 24 ಅಂಚೆ ಕಾರ್ಡ್ ಗಳು ಕೇವಲ ರೂ.150/- ಕ್ಕೆ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಕೋರಲಾಗಿದೆ.

Leave a Comment