ಪುತ್ತೂರು ಅಂಚೆ ಇಲಾಖೆಯಿಂದ ಪತ್ರಲೇಖನ ಮತ್ತು ಚಿತ್ರಕಲಾ ಸ್ಪರ್ಧೆ

ಭಾರತೀಯ ಅಂಚೆ ಸಪ್ತಾಹದ ಸುಸಂದರ್ಭದಲ್ಲಿ, ಪುತ್ತೂರು ಅಂಚೆ ವಿಭಾಗವು ಶಾಲಾ ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಅ) 1ನೇ ತರಗತಿಯಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ – ಪೋಸ್ಟ್ ಕಾರ್ಡಿನಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ
ಆ) 8ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ – ಪತ್ರ ಬರೆಯುವ ಸ್ಪರ್ಧೆ.

ನಿಬಂಧನೆಗಳು
ಅ) ಐವತ್ತು ಪೈಸೆಯ ಪೋಸ್ಟ್ ಕಾರ್ಡ್ ನಲ್ಲಿ ಸ್ಪರ್ಧಿಯು ಭೇಟಿಮಾಡಿದ ಯಾವುದೇ ಅಂಚೆ ಕಛೇರಿಯ ಚಿತ್ರ ವನ್ನು ಬಿಡಿಸುವುದು. ಸ್ಪರ್ಧಿಯ ಹೆಸರು , ತರಗತಿ ಹಾಗೂ ಶಾಲೆಯ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪೋಸ್ಟ್ ಕಾರ್ಡ್ ನ ಹಿಂಬದಿಯಲ್ಲಿ ನಮೂದಿಸಿರಬೇಕು.

ಆ) ಬಿಳಿ ಹಾಳೆಯಲ್ಲಿ ಸ್ವ-ಹಸ್ತಾಕ್ಷರಿತ ಪತ್ರವನ್ನು ಸ್ಪರ್ಧಿಯು “21ನೆಯ ಶತಮಾನದಲ್ಲಿ ಅಂಚೆ ಕಛೇರಿಯ ಪ್ರಸ್ತುತತೆ” ಎಂಬ ವಿಷಯದ ಬಗ್ಗೆ ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ಅಂಚೆ ವಿಭಾಗ ಪುತ್ತೂರು- 574 201 ಇವರ ವಿಳಾಸಕ್ಕೆ ಬರೆಯಬೇಕು.

ಸ್ಪರ್ಧಿಯು ತನ್ನ ಕೃತಿಯನ್ನು ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ಅಂಚೆ ವಿಭಾಗ ಪುತ್ತೂರು- 574 201 ಈ ವಿಳಾಸಕ್ಕೆ 14.10.2022 ರ ಮೊದಲು ತಲುಪುವಂತೆ ರವಾನಿಸಲು ಕೋರಲಾಗಿದೆ.

ಎರಡೂ ವಿಭಾಗದಲ್ಲೂ ಪ್ರಥಮ , ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ವಿಜೇತರ ವಿವರಗಳನ್ನು ಅವರವರ ಶಾಲೆಗೆ ಕಳುಹಿಸಲಾಗುವುದು.

ಈ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಲು ಕೋರಲಾಗಿದೆ.

Leave a Comment