ಪಾಣೆಮಂಗಳೂರು ಪೋಸ್ಟ್ ಆಫೀಸ್ ಬಿಲ್ಡಿಂಗ್ ನೂತನ ಕಟ್ಟಡಕ್ಕೆ ಸ್ಥಳಾಂತರ

ಸರಕಾರದ ವತಿಯಿಂದ ನೀಡಲ್ಪಡುವ ಸಾರ್ವಜನಿಕ ಸೇವೆಯನ್ನು ನೀಡುತ್ತಿರುವ ಹಲವು ಇಲಾಖೆಗಳಲ್ಲಿ ಒಂದಾಗಿರುವ ಅಂಚೆ ಇಲಾಖೆಯ ಪುತ್ತೂರು ವಿಭಾಗದಡಿಯಲ್ಲಿ ಬರುವ ಪಾಣೆಮಂಗಳೂರು ಉಪ ಅಂಚೆ ಕಛೇರಿಯು ಇಂದು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಈ ನೂತನ ಸ್ಥಳಾಂತರಗೊಂಡ ಅಂಚೆ ಕಛೇರಿಯನ್ನು, ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಡಾ. ಏಂಜಲ್ ರಾಜ್ (ಐ.ಪಿ.ಒ.ಎಸ್.) ರವರು ಉದ್ಘಾಟಿಸಿದರು. ಬಂಟ್ವಾಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ. ಲೋಕನಾಥ ಎಂ., ಕಂಪ್ಯೂಟರ್ ತಂತ್ರಜ್ನರಾದ ಶ್ರೀ. ನೂತನ್ ವೈ ಬಂಗೇರ, ಉಪ ಅಂಚೆ ಪಾಲಕರಾದ ಶ್ರೀಮತಿ ಅನಿತಾ ಹಾಗೂ ಅಂಚೆ ಸಹಾಯಕರಾದ ಶ್ರೀಮತಿ ಪುಷ್ಪವತಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಅಂಚೆ ಅಧೀಕ್ಷಕರು ಕಟ್ಟಡದ ಮಾಲೀಕರಾದ ಶ್ರೀ. ನಝೀರ್ ಅಹಮದ್ ಆಲಡ್ಕ ರವರಿಗೆ ಧನ್ಯವಾದ ಸಮರ್ಪಿಸಿದರು.
ಹೆಚ್ಚಿನ ಸಂಖ್ಯೆಯ ಗ್ರಾಹಕರು ಸೇವೆಯನ್ನು ಪಡೆಯುತ್ತಿರುವ ಕಛೇರಿಯಲ್ಲಿ ಇರಬೇಕಾದ ಅಗತ್ಯ ಸೌಕರ್ಯಗಳನ್ನು ನೀಡುವುದು ಇಲಾಖೆಯ ಕರ್ತವ್ಯ. ತನ್ನಿಮಿತ್ತ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಪಾಣೆಮಂಗಳೂರು ಅಂಚೆ ಕಛೇರಿಯು ಗ್ರಾಹಕ ಸಂತೋಷಿಯಾಗಿದೆ. ಸ್ಥಳಾಂತರಗೊಂಡ ಈ ನೂತನ ಕಛೇರಿಗೆ ಈ ಹಿಂದಿನಂತೆಯೇ ಗ್ರಾಹಕರು ಭೇಟಿ ನೀಡಿ ಅಂಚೆ ಸೇವೆಯನ್ನು ಪಡೆಯಬೇಕಾಗಿ ವಿನಂತಿಸಲಾಗಿದೆ.

Leave a Comment