ಪೋಸ್ಟ್ ಆಫೀಸ್ ನ ಈ ಇನ್ಸೂರೆನ್ಸ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ : ಕೇವಲ 399 ಕಟ್ಟಿ 10 ಲಕ್ಷ ಸಿಗುತ್ತದೆ.

ಈ ಲೇಖನದಲ್ಲಿ ನಾವು ಅಂಚೆ ಕಚೇರಿಯ ಅಪಘಾತ ವಿಮೆ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ವಿಮೆ ಬಹಳ ಮುಖ್ಯವಾಗಿದೆ. ನಮ್ಮ ಜೀವನದಲ್ಲಿ ಯಾವುದೇ ಸಮಯದಲ್ಲಿ ಅಪಘಾತಗಳು ಸಂಭವಿಸಬಹುದು ಆದ್ದರಿಂದ ಪ್ರತಿಯೊಬ್ಬರೂ ಅಪಘಾತ ವಿಮೆ ಪಾಲಸಿಯನ್ನು ಹೊಂದಿರುವುದು ಅವಶ್ಯಕ ಏಕೆಂದರೆ ಈ ಅಪಘಾತ ವಿಮೆ ಪಾಲಸಿಯು ಅಪಘಾತದ ಚಿಕಿತ್ಸೆಯ ವೆಚ್ಚವನ್ನು ಒಳಗೊಂಡಿರುತ್ತದೆ ಮತ್ತು ಸಾವು ಅಥವಾ ಅಂಗವೈಕಲ್ಯ ಆದ ಸಂದರ್ಭದಲ್ಲಿ ನಮಗೆ ಹಣಕಾಸಿನ ನೆರವನ್ನು ನೀಡುತ್ತದೆ. ಆದರೂ ಸಹಿತ ಇಂದಿಗೂ ಭಾರತದಲ್ಲಿ ಅನೇಕ ಜನರು ವಿಮೆ ಪಾಲಸಿಯನ್ನ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ ಇದಕ್ಕೆ ಒಂದು ಮುಖ್ಯ ಕಾರಣ ಏನೆಂದರೆ ವಿಮೆ ಕಂತುಗಳ ವೆಚ್ಚವನ್ನು ಕಟ್ಟಲಿಕ್ಕೆ ಆಗದೆ ಇರುವುದು. ಇದನ್ನು ಗಮನದಲ್ಲಿಟ್ಟುಕೊಂಡು ಅಂಚೆ ಇಲಾಖೆ ತನ್ನ ಗ್ರಾಹಕರ ಸುರಕ್ಷಕತೆಗಾಗಿ ದೊಡ್ಡ ಮಟ್ಟದ ಅಪಘಾತ ವಿಮೆಯನ್ನು ಪರಿಚಯಿಸಿದೆ.

ಇದನ್ನೂ ಓದಿ: ಪೋಸ್ಟ್ ಮ್ಯಾನ್ ಮೂಲಕ ವಿಮೆ ನಿಮ್ಮ ಮನೆ ಬಾಗಿಲಿಗೆ

ಅಂಚೆ ಇಲಾಖೆಯ ಅಂಗಸಂಸ್ಥೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ (IPPB) ಅಪಘಾತ ವಿಮಾ ಪಾಲಿಸಿಯನ್ನು ಕೇವಲ 399ರೂ. ಹಾಗೂ 299ರೂ.ಗೆ ಪರಿಚಯಿಸಿದೆ. ಈ ಯೋಜನೆಗೆ ಸೇರ್ಪಡೆಗೊಂಡರೆ 10ಲಕ್ಷ ರೂ. ಅಪಘಾತ ವಿಮೆ ಪಡೆಯಲು ನೀವು ಅರ್ಹತೆ ಗಳಿಸುತ್ತೀರಿ. ಪ್ರತಿ ವರ್ಷ ವಿಮಾ ಪಾಲಿಸಿಯನ್ನು ನವೀಕರಿಸುವುದು ಅವಶ್ಯಕ. ಭಾರತೀಯ ಅಂಚೆ ಇಲಾಖೆಯು ಟಾಟಾ AIG ಸಹಯೋಗದಲ್ಲಿ ಈ ಅಪಘಾತ ವಿಮಾ ಪಾಲಿಸಿಯನ್ನು ತಂದಿದೆ.

299 ರೂ. ಬೇಸಿಕ್ ವಿಮಾ ಯೋಜನೆ :

299 ರೂ. ಬೇಸಿಕ್ ವಿಮಾ ಯೋಜನೆಯಲ್ಲಿ ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಕಾಯಂ ಅಂಗವೈಕಲ್ಯ ಹಾಗೂ ಪಾರ್ಶ್ವವಾಯುಗೆ ತುತ್ತಾದರೆ 10ಲಕ್ಷ ರೂ. ವಿಮಾ ಕವರೇಜ್ ಪಡೆಯಬಹುದು. ಈ ಪ್ಲ್ಯಾನ್ ನಲ್ಲಿ IPD ಯಲ್ಲಿ 60,000ರೂ. ತನಕ ವೈದ್ಯಕೀಯ ವೆಚ್ಚ ಗಳನ್ನು ಪಡೆಯಬಹುದು. ಹಾಗೆಯೇ OPD ಯಲ್ಲಿ 30,000ರೂ. ಅಪಘಾತ ವೈದ್ಯಕೀಯ ವೆಚ್ಚಗಳನ್ನು ಕ್ಲೈಮ್ ಮಾಡಲು ಅವಕಾಶ ನೀಡಲಾಗಿದೆ.

399 ರೂ. ಪ್ರೀಮಿಯಂ ವಿಮಾ ಯೋಜನೆ :

399 ರೂ. ಪ್ರೀಮಿಯಂ ಪ್ಲ್ಯಾನ್ ಅಡಿಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಸಂಪೂರ್ಣವಾಗಿ ಅಂಗವೈಕಲ್ಯ ಹೊಂದಿದರೆ , ಪಾರ್ಶ್ವವಾಯುಗೆ ತುತ್ತಾದರೆ 10ಲಕ್ಷ ರೂ. ಅಪಘಾತ ವಿಮೆ ಒದಗಿಸಲಾಗುತ್ತದೆ. ಇನ್ನು IPD ಯಲ್ಲಿ 60,000ರೂ. ತನಕ ವೈದ್ಯಕೀಯ ವೆಚ್ಚ ಗಳನ್ನು ಪಡೆಯಬಹುದು. ಮತ್ತು OPD ಯಲ್ಲಿ 30,000ರೂ. ಅಪಘಾತ ವೈದ್ಯಕೀಯ ವೆಚ್ಚಗಳನ್ನು ಪಡೆಯಬಹುದು. ಒಂದು ವೇಳೆ ಆಸ್ಪತ್ರೆಗೆ ದಾಖಲಾಗಿದ್ರೆ 10 ದಿನಗಳ ಕಾಲ ದಿನಕ್ಕೆ 1000ರೂ. ಪಾವತಿಸಲಾಗುತ್ತದೆ. ಮೃತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ (ಗರಿಷ್ಠ 2 ಮಕ್ಕಳು) ರೂ.1 ಲಕ್ಷ ವರೆಗೆ ಸಹಾಯ ಧನ ನೀಡಲಾಗುತ್ತದೆ. ವಾಹನ ಅಪಘಾತಗಳು, ಹಾವು ಕಡಿತ, ವಿದ್ಯುತ್ ಆಘಾತ. ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದರೆ 10ಲಕ್ಷ ರೂ. ವಿಮಾ ಪರಿಹಾರ ಪಡೆಯಲು ಅವಕಾಶವಿದೆ.

ವಿಮೆ ಮಾಡಿಸಲು ಅರ್ಹತೆ ಏನು?

  1. ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್ ಖಾತೆ ಹೊಂದಿರುವ ಎಲ್ಲಾ ಗ್ರಾಹಕರು.
  2. ಗ್ರಾಹಕರ ವಯಸ್ಸು 18-65 ವರ್ಷಗಳ ನಡುವೆ ಇರಬೇಕು.

ಈ ಅಪಘಾತ ವಿಮೆ ಮಾಡಿಸುವುದು ಹೇಗೆ ?

ಈಗಾಗಲೇ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ನೀವು ಖಾತೆ ಹೊಂದಿದ್ದರೆ 299 ರೂ.ಅಥವಾ 399 ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಬಹುದು. ಒಂದು ವೇಳೆ ನೀವು ಇನ್ನೂ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರದೆ ಇದ್ದರೆ 100ರೂ. ಪಾವತಿಸಿ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ಖಾತೆ ತೆರೆಯಿರಿ. ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು. ಆ ಬಳಿಕ ಖಾತೆಯಲ್ಲಿ ಕನಿಷ್ಠ 500 ರೂ. ಹಣ ಇಡಬೇಕು. ಆ ಬಳಿಕ 299ರೂ.ಅಥವಾ 399ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು. ಹಾಗೂ ಈ ಮುಖ್ಯವಾದ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಸಂಬಂಧಿಕರಿಗೂ ಈ ಕೊಡಲೇ ಶೇರ್ ಮಾಡಿ.

Leave a Comment