ಅಂಚೆ ಕಚೇರಿಯಲ್ಲಿ UPI ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ

ತನ್ನ ಸೇವೆಗಳನ್ನು ಗ್ರಾಹಕ ಸ್ನೇಹಿಯನ್ನಾಗಿ ಮಾಡುವ ಪ್ರಯತ್ನದಲ್ಲಿ, ದೇಶಾದ್ಯಂತ ಎಲ್ಲಾ ಇಲಾಖಾ ಅಂಚೆ ಕಚೇರಿಗಳ ಬುಕಿಂಗ್ ಕೌಂಟರ್‌ಗಳಲ್ಲಿ ಅಂಚೆ ಇಲಾಖೆಯು ಯುಪಿಐ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಈ ನವೀನ ಸೇವೆಯು ಪುತ್ತೂರು ಅಂಚೆ ವಿಭಾಗದಡಿಯಲ್ಲಿ ಬರುವ 2 ಪ್ರಧಾನ ಅಂಚೆ ಕಛೇರಿ ಮತ್ತು 70 ಉಪ ಅಂಚೆ ಕಛೇರಿ ಗಳಲ್ಲಿ ಈಗಾಗಲೇ ಲಭ್ಯವಿದೆ. ಈ ನೂತನ ವ್ಯವಸ್ಥೆಯಡಿಯಲ್ಲಿ ವಿವಿಧ ರೀತಿಯ ಪತ್ರಗಳು / ಪಾರ್ಸೆಲ್‌ಗಳು ಮತ್ತು ಇತರ ಅಂಚೆ ವಸ್ತುಗಳ ಬುಕಿಂಗ್ ಶುಲ್ಕವನ್ನು ನಗದು ಜೊತೆಗೆ ಡಿಜಿಟಲ್ ಪಾವತಿಯ ಮೂಲಕವೂ ಪಾವತಿಸಬಹುದು.

IMG 20220901 WA0014

ಪತ್ರಗಳು/ಪಾರ್ಸೆಲ್‌ಗಳು ಬುಕಿಂಗ್ ಸಮಯದಲ್ಲಿ, ಕೌಂಟರ್ ನಲ್ಲಿ ಇರುವ ಅಂಚೆ ಸಹಾಯಕರು ಪತ್ರವನ್ನು ಕಳುಹಿಸುವವರ ಮತ್ತು ಸ್ವೀಕರಿಸುವವರ ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗ್ರಾಹಕರನ್ನು ಕೇಳಲಾಗುತ್ತದೆ. ಆಗ ಗ್ರಾಹಕರು ತಮ್ಮಲ್ಲಿನ Dak Pay, Google Pay, PhonePe, Paytm, Amazon Pay ಮುಂತಾದ ಯಾವುದೇ UPI ಪಾವತಿ ಮೊಬೈಲ್ ಅಪ್ಲಿಕೇಶನ್ ಮೂಲಕ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಪಾವತಿಸಬಹುದಾಗಿದೆ.

IMG 20220901 WA0013

ಈ ಸೇವೆಯು ಅತ್ಯಂತ ಸುಲಲಿತವಾಗಿದ್ದು, ಗ್ರಾಹಕರಿಗೂ ತಮ್ಮ ಸಮಯದ ಉಳಿತಾಯವಾಗುತ್ತದೆ ಹಾಗೂ ದೇಶದ ಡಿಜಿಟಲ್ (ನಗದು ರಹಿತ) ಆರ್ಥಿಕತೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ.

ಇದನ್ನೂ ಓದಿ:

Leave a Comment