ಲಕ್ಷದೀಪೋತ್ಸವದಲ್ಲಿ ಅಂಚೆ ಇಲಾಖೆಯಿಂದ ಸೇವಾ ಸೌಲಭ್ಯ


ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದಿನಾಂಕ 19.11.2022 ರಿಂದ 24.11.2022 ರ ವರೆಗೆ ನಡೆಯುತ್ತಿರುವ ಲಕ್ಷದೀಪೋತ್ಸವ – 2022 ರ ಶುಭ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗವು ಅಂಚೆ ಇಲಾಖೆಯ ವಿವಿಧ ಸೇವೆಗಳ ಮಾಹಿತಿ ಮತ್ತು ಸ್ಥಳದಲ್ಲೇ ಸೇವೆಯನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕೌಂಟರಿನಲ್ಲಿ ಆಧಾರ್ ಸೇವೆ, ಸಿ. ಎಸ್.ಸಿ. ಎಲ್ಲಾ ಬಗೆಯ ಉಳಿತಾಯ ಖಾತೆಗಳು, ಅಂಚೆ ಜೀವವಿಮೆ, ಐ.ಪಿ.ಪಿ.ಬಿ ಹಾಗೂ ಆಧಾರ್ ಆಧಾರಿತ ಬ್ಯಾಂಕ್ ಖಾತೆಯಿಂದ ನಗದು ಪಡೆಯುವ ಸೌಲಭ್ಯ, ವಿವಿಧ ಬಗೆಯ ಅಂಚೆ ಚೀಟಿಗಳು, ವಿಶೇಷ ಅಂಚೆ ಲಕೋಟೆಗಳು, ಪಿಕ್ಚರ್ ಪೋಸ್ಟ್ ಕಾರ್ಡುಗಳು ದೊರೆಯುತ್ತವೆ. ಇದರೊಂದಿಗೆ ನಿಮ್ಮದೇ ಭಾವಚಿತ್ರವುಳ್ಳ ಮೈ ಸ್ಟ್ಯಾಂಪ್ ಸಹ ಪಡೆಯಬಹುದು. ಆಸಕ್ತ ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಲು ಈ ಮೂಲಕ ಕೋರಲಾಗಿದೆ.

ಇದನ್ನೂ ಓದಿ:

Leave a Comment