ವೆಬ್ಸೈಟ್ ಗೈಡ್: ಡಿಜಿಸೇವೆ ಮೂಲಕ ಸಂಪೂರ್ಣ ಮಾರ್ಗದರ್ಶಿ

ನಮಸ್ಕಾರ ಗೆಳೆಯರೇ digiseve.com ಮೂಲಕ ಸಂಪೂರ್ಣ ವೆಬ್ಸೈಟ್ ಮತ್ತು ಟೆಕ್ ಮಾಹಿತಿ ನೀಡುವ ಸಣ್ಣ ಪ್ರಯತ್ನ ನನ್ನದು. ನಾನು ನೀಡುವ ಮಾಹಿತಿ ನಿಮಗೂ ಅನುಕೂಲ ವಾಗಬಹುದು ಎಂಬ ನಂಬಿಕೆ ನನಗಿದೆ.

ವೆಬ್ ಸೈಟ್ ಅನ್ನು ಹಲವು ವಿಧಗಳಲ್ಲಿ ರಚಿಸ ಬಹುದು. ಹಾಗೂ ಅನೇಕ ವಿಧದ ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ (CMS) ಗಳನ್ನು  ಉಪಯೋಗಿಸಬಹುದು.
ಉದಾಹರಣೆಗೆ: ವರ್ಡ್ ಪ್ರೆಸ್,ವಿಕ್ಸ್, ವೀಬ್ಲಿ ಇತ್ಯಾದಿ.

ನಾವು ಮೊದಲು ವರ್ಡ್ ಪ್ರೆಸ್ ಬಗ್ಗೆ ತಿಳಿಯೋಣ.

ವರ್ಡ್ ಪ್ರೆಸ್ ಗೈಡ್
ವರ್ಡ್ ಪ್ರೆಸ್ ಗೈಡ್

ವರ್ಡ್ ಪ್ರೆಸ್ ಗೈಡ್ ಭಾಗ-1: ಪೀಠಿಕೆ

ಗೆಳೆಯರೇ ನಾನು ಕಲಿತಿರುವ ಮಾಹಿತಿಯನ್ನು ವರ್ಡ್ ಪ್ರೆಸ್ ಗೈಡ್ ಎಂಬ ಶೀರ್ಷಿಕೆಯಡಿಯಲ್ಲಿ ವೆಬ್ ಸೈಟ್ ರಚನೆಯ ಸಂಪೂರ್ಣ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ಈ ಸಂಪೂರ್ಣ ಗೈಡ್ ಓದಿದ ನಂತರ ನೀವು ಕೂಡ ನಿಮ್ಮ ಸ್ವಂತ ವೆಬ್ ಸೈಟ್ ಅನ್ನು ಇತರರ ನೆರವು ಇಲ್ಲದೆ ನಿರ್ಮಿಸಬಹುದು.

ಸಾಮಾನ್ಯವಾಗಿ ಹೆಚ್ಚಿಗೆ ಇಂಗ್ಲೀಷ್ ನಲ್ಲಿ ವೆಬ್ ಸೈಟ್ ಗಳು ರಚನೆಗೊಂಡಿದೆ. ಈಗ ಕನ್ನಡದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ವೆಬ್ ಸೈಟ್ ಗಳು ಆರಂಭವಾಗುತ್ತಿವೆ.
ಇವುಗಳಲ್ಲಿ ಹೆಚ್ಚಿನ ವೆಬ್ ಸೈಟ್ ಗಳು ಬ್ಲಾಗರ್ ನಲ್ಲಿ ನಿರ್ಮಿಸಲಾಗಿದೆ. ಕೆಲವು ವೆಬ್ ಸೈಟ್ ಮಾತ್ರ ವರ್ಡ್ ಪ್ರೆಸ್ ನಲ್ಲಿ ನಿರ್ಮಿಸಲಾಗಿದೆ.

ಕನ್ನಡದಲ್ಲಿಯೂ ವರ್ಡ್ ಪ್ರೆಸ್ ಮೂಲಕ ವೆಬ್ ಸೈಟ್ ಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದು ಉತ್ತಮ ಬೆಳವಣಿಗೆಯೇ ಸರಿ. ಈಗ ಗೂಗಲ್ ಕೂಡ ಕನ್ನಡ ವೆಬ್ಸೈಟ್ ಗಳನ್ನೂ ಪ್ರಮೋಟ್ ಮಾಡುತ್ತಿದೆ. ಇದಕ್ಕೆ ಉತ್ತಮ ಉದಹರಣೆ ಎಂದರೆ ಕನ್ನಡ ವೆಬ್ ಸೈಟ್ ಗಳಿಗೂ ಆಡ್ಸೆನ್ಸ್ ಸೌಲಭ್ಯ ದೊರೆತಿರುವುದು.

ಇತರ ಭಾಷಾ ವೆಬ್ ಸೈಟ್ ಗಳಿಗೆ ಸಿಗುವ ಸೌಲಭ್ಯಗಳು ಕನ್ನಡಿಗರ ಕನ್ನಡ ವೆಬ್ ಸೈಟ್ ಗಳಿಗೂ ಸಿಗುವಂತಾಗಲಿ ಎಂಬ ಆಶಯ ನನ್ನದು.

ವೆಬ್ ಸೈಟ್ ಗಳ ಅವಶ್ಯಕತೆ ಏನಿದೆ ?

ಇಂದಿನ ಡಿಜಿಟಲ್ ಯಗದಲ್ಲಿ ಸ್ವಂತ ವೆಬ್ಸೈಟ್ ಎನ್ನುವುದು ತಮ್ಮ ಬ್ಯುಸಿನೆಸ್,ಸ್ಟಾರ್ಟ್ಅಪ್, ಅಥವಾ ವೈಯಕ್ತಿಕವಾಗಿ ತುಂಬಾ ಅವಶ್ಯಕ ಎನ್ನಬಹುದು.

  • ಬ್ಲಾಗ್ ಬರೆಯುವವರು ವೆಬ್ ಸೈಟ್ ನಿರ್ಮಿಸಬಹುದು.
  • ನಿಮ್ಮ ಬ್ಯುಸಿನೆಸ್ ಅನ್ನು ಡಿಜಿಟಲೀಕರಣ ಮಾಡಲು ವೆಬ್ಸೈಟ್ ರಚಿಸಬಹುದು.
  • ಹೀಗೆ ನಿಮ್ಮ ವ್ಯವಹಾರವನ್ನು ಆನ್ಲೈನ್ ಗೆ ತರಲು ಒಂದು ವೆಬ್ಸೈಟ್,ಬ್ಲಾಗ್ ಬರೆಯಲು,ಆನ್ಲೈನ್ ಅಂಗಡಿ ಮಾಡಲು, ಡಿಜಿಟಲ್ ಮಾರ್ಕೆಟಿಂಗ್ ಮಾಡಲು,ನ್ಯೂಸ್ ಪೋರ್ಟಲ್, ಆನ್ಲೈನ್ ಕೋರ್ಸ್ ಮಾಡಲು ಹೀಗೆ ಅನೇಕ ಕೆಲಸಗಳಿಗೆ ವೆಬ್ ಸೈಟ್ ಅತ್ಯಗತ್ಯ.

ನನಗೊಂದು ವೆಬ್ಸೈಟ್ ಬೇಕು

ನಿಮಗೆ ವೆಬ್ಸೈಟ್ ಬೇಕು ಎಂಬ ಅವಶ್ಯಕತೆ ಕಂಡಾಗ ನೀವು ವೆಬ್ ಡಿಸೈನರ್ ಗಳನ್ನು ಸಂಪರ್ಕಿಸಬಹುದು.
ನಿಮ್ಮ ಅವಶ್ಯಕತೆ ತಕ್ಕಂತೆ ಉತ್ತಮವಾಗಿ ವೆಬ್ ಸೈಟ್ ರಚಿಸುವ ಒಳ್ಳೆಯ ಸಂಸ್ಥೆಗಳು ಇವೆ. ಇದೇ ರೀತಿ ನಿಮ್ಮಿಂದ ಹಣ ಸುಲಿಗೆ ಮಾಡುವ ವೆಬ್ ಡಿಸೈನ್ ಸಂಸ್ಥೆಗಳು ಸಿಗುತ್ತವೆ.

ಇಂತಹ ಸಂಸ್ಥೆಗಳು ನಿಮ್ಮಿಂದ ದುಬಾರಿ ಹಣ ಪಡೆದು
ಕಳಪೆ ಮಟ್ಟದ ವೆಬ್ಸೈಟ್ ಸಿದ್ದಪಡಿಸಿ ಕೊಡುತ್ತವೆ.

ಇವರು ನಿಮ್ಮಿಂದ ಹತ್ತಿಪ್ಪತ್ತು ಸಾವಿರ ಹಣ ಪಡೆದು ಒಂದು ಡೊಮೈನ್ ಹೆಸರು, ಹೋಸ್ಟಿಂಗ್ ಹಾಗೂ ಒಂದು ಥೀಮ್ ಅವುಗಳನ್ನು ಜೋಡಿಸಿ ನಿಮಗೆ ಒಂದು ಸರಳವಾದ ವೆಬ್ಸೈಟ್ ನಿರ್ಮಿಸಿಕೊಡುತ್ತಾರೆ.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಇವರು ಕೇವಲ ಒಂದು ಡೊಮೈನ್ ನೇಮ್ ಗೆ ಮಾತ್ರ ಹಣ ಪಾವತಿ ಮಾಡುತ್ತಾರೆ. ಹೋಸ್ಟಿಂಗ್ ಹಾಗೂ ಥೀಮ್ ಬಂಡಲ್ ಗಳನ್ನು ಇವರು ಮೊದಲೇ ಖರೀದಿಸಿ ಇಟ್ಟಿರುತ್ತಾರೆ.

ಈಗ ವರ್ಡ್ ಪ್ರೆಸ್ ನಲ್ಲಿ ಕಡಿಮೆ ಬಜೆಟ್ ನಲ್ಲಿ ಒಂದು ವೆಬ್ಸೈಟ್ ನಿರ್ಮಿಸುವುದು ತುಂಬಾ ಸುಲಭ. ಮೂರು ನಾಲ್ಕು ಸಾವಿರ ರೂಪಾಯಿಯಲ್ಲಿ ನಿರ್ಮಿಸಬಹುದಾದ
ವೆಬ್ಸೈಟ್ ಅನ್ನು ವೆಬ್ ಡಿಸೈನರ್ ಗಳು ಅವರ ಪೇಮೆಂಟ್ ಅನ್ನು ಸೇರಿಸಿ 10-30 ರೂ.ಗೆ ನಿರ್ಮಿಸಿಕೊಡಬಹುದು.

ಆದರೆ ವರ್ಡ್ ಪ್ರೆಸ್ ಅನ್ನು ಬಿಟ್ಟು ಬೇರೆ ರೀತಿಯಲ್ಲಿ ನೀವು ವೆಬ್ಸೈಟ್ ನಿರ್ಮಿಸಲು ಬಯಸಿದರು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಯಾಕೆಂದರೆ ವೆಬ್ ಡಿಸೈನರ್ ಗಳು ನಿಮ್ಮ ವೆಬ್ಸೈಟ್ನ ಪ್ರತಿ ಪುಟವನ್ನು ಕೊಡ ಕೋಡಿಂಗ್ ಮೂಲಕ ನಿರ್ಮಿಸಬೇಕಾಗುತ್ತದೆ. ಇದು ಅವರಿಗೂ ಕೂಡ ಅಧಿಕ ಶ್ರಮದ ಕೆಲಸ ಹಾಗೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ನೀವು ಕೂಡ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಮುಂದೆ ಕೂಡ ಅವರನ್ನೇ ಅವಲಂಬಿಸಬೇಕಾಗುತ್ತದೆ.

ಇವರು ವೆಬ್ಸೈಟ್ ಆರಂಭಿಸಲು ಕಡಿಮೆ ಹಣ ಪಡೆದು ನಂತರ ಅ ವೆಬ್ಸೈಟ್ ನಮ್ಮ ಉಪಯೋಗಕ್ಕೆ ಬರಬೇಕಾದರೆ 10, 20, 30, ಸಾವಿರ ರೂ. ಹೀಗೆ ಹಣ ಪಾವತಿಸುತ್ತಲೇ ಇರಬೇಕಾಗುತ್ತದೆ. ಮುಂದೆ ನಿಮ್ಮ ವೆಬ್ ಸೈಟ್ ನಲ್ಲಿ ಕಂಟೆಂಟ್ ಜಾಸ್ತಿಯಾದಂತೆ ಖರ್ಚು ಕೂಡ ಹೆಚ್ಚಾಗುತ್ತದೆ. ಮುಂದೆ ಅವರು ಹಣ ನೀಡಿದರೆ ಮಾತ್ರ ವೆಬ್ಸೈಟ್ ಸರಿ ಮಾಡಿಕೊಡುತ್ತಾರೆ. ನಿಮ್ಮ ಸಂಪರ್ಕಕ್ಕೂ ಕೂಡ ಅವರು ಸರಿಯಾಗಿ ಸಿಗುವುದಿಲ್ಲ.

ಒಮ್ಮೆ ಬೇರೆಯವರಿಂದ ವೆಬ್ ಸೈಟ್ ನಿರ್ಮಿಸಿಕೊಂಡು ಅದರಲ್ಲಿ ಹಣ ಇನ್ವೆಸ್ಟ್ ಮಾಡಿದ ತಪ್ಪಿಗೆ ಅದರಲ್ಲೇ ಹೆಣಗಾಡುವ ಪರಿಸ್ಥಿತಿ ಬರುತ್ತದೆ. ನಿಮ್ಮ ಉತ್ಸಾಹ ಕೂಡಾ ಕಡಿಮೆಯಾಗುತ್ತೆ. ಎಲ್ಲಾ ವೆಬ್ ಡಿಸೈನರ್ ಗಳು ಈ ರೀತಿ ಹಣ ಸುಲಿಗೆ ಮಾಡುತ್ತಾರೆ ಎಂದು ನಾನು ದೂರುವುದಿಲ್ಲ. ಕೆಲವರು ಕಡಿಮೆ ಹಣದಲ್ಲಿ ಉತ್ತಮ ಸೇವೆ ನೀಡುವವರು ಇದ್ದಾರೆ.

ಇದರ ಬದಲಿಗೆ ನೀವೇ ನಿಮ್ಮ ಕನಸಿನ ವೆಬ್ಸೈಟ್ ವರ್ಡ್ ಪ್ರೆಸ್ ಮೂಲಕ ರಚಿಸಬಹುದು. ಇದಕ್ಕೆ ನಿಮಗೆ ಬೇಸಿಕ್ ವರ್ಡ್ ಪ್ರೆಸ್ ಜ್ಞಾನ ಇದ್ದರೆ ಸಾಕು. ನಿಮಗೆ ಬೇಕಾದ ವರ್ಡ್ ಪ್ರೆಸ್ ಮಾಹಿತಿಯನ್ನು ಈ ಗೈಡ್ ಮೂಲಕ ನೀಡುವ ಸಣ್ಣ ಪ್ರಯತ್ನ ನನ್ನದು.

ಈ ವರ್ಡ್ ಪ್ರೆಸ್ ಗೈಡ್ ಅನ್ನು ಸಂಪೂರ್ಣವಾಗಿ ಓದಿದ ಮೇಲೆ ನೀವು ಕೂಡ ನನ್ನಂತೆ ಕಡಿಮೆ ಖರ್ಚಿನಲ್ಲಿ ವೆಬ್ಸೈಟ್ ರಚಿಸಬಹುದು.

ನಾನು ಓದಿರುವುದು ವಾಣಿಜ್ಯ ಪದವಿ. ಆದರೂ ಬ್ಲಾಗರ್ ಹಾಗೂ ವರ್ಡ್ ಪ್ರೆಸ್ ಮೂಲಕ ವೆಬ್ಸೈಟ್ ರಚನೆಯ ಬಗ್ಗೆ ಒಂದಿಷ್ಟು ಕಲಿತಿದ್ದೇನೆ. ಹಾಗೂ ಇನ್ನೂ ಹೆಚ್ಚಿನ ವಿಷಯಗಳನ್ನು ಈಗಲೂ ಕಲಿಯುತ್ತಿದ್ದೇನೆ. ನಾನು ಕಲಿತಿರುವ ಜ್ಞಾನವನ್ನು ನಿಮಗೂ ಕಲಿಸುವ ಉದ್ದೇಶ ನನ್ನದು. ಇದಕ್ಕಾಗಿಯೇ ಈ ಗೈಡ್ ಅನ್ನು ರಚಿಸಿದ್ದೇನೆ.

ವೆಬ್ಸೈಟ್ ಅನ್ನು ನೀವೇ ರಚಿಸಿ ಅಥವಾ ವೆಬ್ ಡಿಸೈನರ್ ಗಳ ಮೂಲಕ ರಚಿಸಿ. ಇದೆಲ್ಲದಕ್ಕೂ ಮುಂದೆ ಈ ಗೈಡ್ ನಿಂದ ನಿಮಗೆ ತುಂಬಾ ಅನುಕೂಲವಾಗಬಹುದು.

ಈ ಜಗತ್ತಿನಲ್ಲಿ 30% ರಷ್ಟು ವೆಬ್ಸೈಟ್ ಗಳು ವರ್ಡ್ ಪ್ರೆಸ್ ಮೂಲಕವೇ ನಿರ್ಮಿಸಲಾಗಿದೆ. ಯಾಕೆಂದರೆ ವೆಬ್ ಸೈಟ್ ಅನ್ನು ವರ್ಡ್ ಪ್ರೆಸ್ ನಲ್ಲಿ ತುಂಬಾ ಸುಲಭವಾಗಿ ನಿರ್ಮಿಸಬಹುದು. ಹಾಗೂ ಇನ್ನೂ ಅನೇಕ ಪ್ರಯೋಜನಗಳಿವೆ.

ವರ್ಡ್ ಪ್ರೆಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಭಾಗ – 2 ರಲ್ಲಿ ಕಲಿಯೋಣ

ವರ್ಡ್ ಪ್ರೆಸ್ ಗೈಡ್ ಭಾಗ – 2

ಯಾಕೆ ವರ್ಡ್ ಪ್ರೆಸ್ ಎಲ್ಲಕಿಂತ ಉತ್ತಮ?

Leave a Comment