ವೆಬ್ಸೈಟ್ ಗೈಡ್: ಡೊಮೈನ್ ನೇಮ್ ಎಂದರೇನು ಮತ್ತು ಡೊಮೈನ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ನಮ್ಮಲ್ಲಿ ವೆಬ್ಸೈಟ್ ಮಾಡುವ ಮೊದಲು ಮೂಡುವ ಪ್ರಶ್ನೆ ಏನೆಂದರೆ ಡೊಮೈನ್ ನೇಮ್ ಎಂದರೇನು ಮತ್ತು ಡೊಮೈನ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ನೀವು ಒಬ್ಬ ಬಿಗಿನರ್ ಆಗಿದ್ದರೆ, ವೆಬ್ಸೈಟ್ ಮಾಡಲು ನಿಮಗೆ ಡೊಮೈನ್ ಬೇಕು ಎಂದು ನೀವು ಕೇಳಿರಬಹುದು.

ಆದಾಗ್ಯೂ ಅನೇಕ ಆರಂಭಿಕರಿಗೆ ಡೊಮೈನ್ ನೇಮ್, ವೆಬ್ಸೈಟ್ ಅಥವಾ ವೆಬ್ಸೈಟ್ ಹೋಸ್ಟಿಂಗ್ ಸೇವೆಗಳ ಬಗ್ಗೆ ಗೊಂದಲವಿರುತ್ತದೆ. ನೀವು ಬಿಗಿನರ್ ಆಗಿದ್ದರೆ ಎಲ್ಲಾ ಪದಗಳು ನಿಮಗೆ ತುಂಬಾ ತಾಂತ್ರಿಕವಾಗಿ ಕಾಣಿಸಬಹುದು.

ಈ ವೆಬ್ಸೈಟ್ ಗೈಡ್ ನಲ್ಲಿ , ನಾನು ನಿಮಗೆ ಡೊಮೈನ್ ನೇಮ್ ಎಂದರೇನು ಮತ್ತು ಡೊಮೈನ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ತಿಳಿಸಿ ಕೊಡುತ್ತೇನೆ. ಇದರಿಂದಾಗಿ ನೀವು ನಿಮ್ಮ ವೆಬ್ಸೈಟ್ ಗೆ ಸರಿಯಾದ ಡೊಮೈನ್ ನೇಮ್ ಆಯ್ಕೆ ಮಾಡಿಕೊಳ್ಳಲು ಸಹಾಯವಾಗಬಹುದು.

ಡೊಮೈನ್ ನೇಮ್
ಡೊಮೈನ್ ನೇಮ್

ಡೊಮೈನ್ ನೇಮ್ ಎಂದರೇನು?

ಡೊಮೈನ್ ನೇಮ್ ನಿಮ್ಮ ವೆಬ್ ಸೈಟ್ ನ ವಿಳಾಸವಾಗಿದೆ. ಜನರು ಅದನ್ನು ಬ್ರೌಸರ್ ನಲ್ಲಿ ಟೈಪ್ ಮಾಡಿ ನಿಮ್ಮ ವೆಬ್ಸೈಟ್ ಗೆ ಭೇಟಿ ನೀಡಬಹುದು. ಈ ನೆಟ್ವರ್ಕ್ ನಲ್ಲಿ ಇರುವ ಪ್ರತಿಯೊಂದು ಕಂಪ್ಯೂಟರ್ ಗಳು ಇತರೆ ಕಂಪ್ಯೂಟರ್ ಗಳೊಂದಿಗೆ ಸಂವಹನ ನಡೆಸಬಹುದು.

ಸರಳವಾಗಿ ಹೇಳುವುದಾದರೆ, ನಿಮ್ಮ ವೆಬ್ ಸೈಟ್ ಮನೆಯಾಗಿದ್ದರೆ, ನಿಮ್ಮ ಡೊಮೈನ್ ನೇಮ್ ಅದರ ವಿಳಾಸವಾಗಿರುತ್ತದೆ.

ಹೆಚ್ಚು ವಿವರವಾದ ಮಾಹಿತಿ:

ಅಂತರ್ಜಾಲವು ಕಂಪ್ಯೂಟರ್ ಗಳ ದೊಡ್ಡ ನೆಟ್ವರ್ಕ್ ಆಗಿದೆ. ಅವು ಜಾಗತಿಕ ನೆಟ್ವರ್ಕ್ ಕೇಬಲ್ ಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿವೆ.

ಅವುಗಳನ್ನು ಗುರುತಿಸಲು, ಪ್ರತಿಯೊಂದು ಕಂಪ್ಯೂಟರ್ ಗಳಿಗೆ ಐಪಿ ಅಡ್ರೆಸ್ ನಿಗದಿಪಡಿಸಲಾಗಿದೆ. ಪ್ರತಿಯೊಂದು ಕಂಪ್ಯೂಟರ್ ಅದರದೇ ಆದ ಐಪಿ ಅಡ್ರೆಸ್ ಅನ್ನು ಹೊಂದಿದ್ದು ಪ್ರತಿಯೊಂದು ಕಂಪ್ಯೂಟರ್ಗಳಿಗೆ ವಿಭಿನ್ನವಾಗಿರುತ್ತದೆ.

ಐಪಿ ಅಡ್ರೆಸ್ ಎಂದರೆ ಅಂತರ್ಜಾಲದಲ್ಲಿ ನಿರ್ದಿಷ್ಟ ಕಂಪ್ಯೂಟರನ್ನು ಗುರುತಿಸುವ ಸಂಖ್ಯೆಗಳ ಸರಣಿಯಾಗಿದೆ. ಉದಾಹರಣೆಗೆ ಒಂದು ಐಪಿ ಅಡ್ರೆಸ್ ಈ ರೀತಿ ಕಾಣುತ್ತದೆ:

66.259.66.2

ಈ ರೀತಿಯ ಐಪಿ ಅಡ್ರೆಸ್ ನೆನಪಿಟ್ಟುಕೊಳ್ಳುವುದು ತುಂಬಾ ಕಷ್ಟ. ನಿಮ್ಮ ನೆಚ್ಚಿನ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ನೀವು ಅಂತಹ ಸಂಖ್ಯೆಗಳನ್ನು ಬಳಸಬೇಕಾಗಿದ್ದರೆ ಕಲ್ಪಿಸಿಕೊಳ್ಳಿ.

ಈ ಸಮಸ್ಯೆಯನ್ನು ಪರಿಹರಿಸಲು ಡೊಮೈನ್ ನೇಮ್ ಗಳನ್ನು ಕಂಡುಹಿಡಿಯಲಾಯಿತು.

ಈಗ ನೀವು ವೆಬ್‌ಸೈಟ್‌ಗೆ ಭೇಟಿ ನೀಡಲು ಬಯಸಿದರೆ, ನೀವು ದೊಡ್ಡ ಐಪಿ ಅಡ್ರೆಸ್ ಸಂಖ್ಯೆಯನ್ನು ಟೈಪ್ ಮಾಡುವ ಅಗತ್ಯವಿಲ್ಲ. ಬದಲಾಗಿ ನಿಮ್ಮ ಬ್ರೌಸರ್ ನಲ್ಲಿ ಸುಲಭವಾಗಿ ನೆನಪಿಡುವ ಡೊಮೈನ್ ನೇಮ್ ಟೈಪ್ ಮಾಡುವ ಮೂಲಕ ನೀವು ನಿಮ್ಮ ನೆಚ್ಚಿನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಉದಾಹರಣೆಗೆ, digiseve.com

ಡೊಮೈನ್ ನೇಮ್ ನಿಜವಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ?

ಡೊಮೈನ್ ನೇಮ್ ನಿಜವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ನಿಮ್ಮ ಬ್ರೌಸರ್‌ನಲ್ಲಿ ನೀವು ಅದನ್ನು ನಮೂದಿಸಿದಾಗ ಏನಾಗುತ್ತದೆ ಎಂಬುದನ್ನು ನಾವು ನೋಡೋಣ.

Untitled design 1 1 min 1 1 1 min 1 1 1
ಡೊಮೈನ್ ಹೇಗೆ ಕಾರ್ಯನಿರ್ವಹಿಸುತ್ತವೆ?

ನಿಮ್ಮ ವೆಬ್ ಬ್ರೌಸರ್‌ನಲ್ಲಿ ನೀವು ಡೊಮೈನ್ ನೇಮ್ ಅನ್ನು ನಮೂದಿಸಿದಾಗ, ಅದು ಮೊದಲು ಡೊಮೈನ್ ನೇಮ್ ಸಿಸ್ಟಮ್ (ಡಿಎನ್ಎಸ್) ಅನ್ನು ರೂಪಿಸುವ ಜಾಗತಿಕ ಸರ್ವರ್‌ಗಳ ನೆಟ್‌ವರ್ಕ್‌ಗೆ ವಿನಂತಿಯನ್ನು ಕಳುಹಿಸುತ್ತದೆ.

ಈ ಸರ್ವರ್‌ಗಳು ನಂತರ ಡೊಮೈನ್ ಗೆ ಸಂಬಂಧಿಸಿದ ನೇಮ್ ಸರ್ವರ್‌ಗಳನ್ನು ಹುಡುಕುತ್ತವೆ ಮತ್ತು ವಿನಂತಿಯನ್ನು ಆ ನೇಮ್ ಸರ್ವರ್‌ಗಳಿಗೆ ರವಾನಿಸುತ್ತವೆ.

ಉದಾಹರಣೆಗೆ, ನಿಮ್ಮ ವೆಬ್ಸೈಟ್ Hostinger ನಲ್ಲಿ ಹೋಸ್ಟ್ ಆಗಿದ್ದರೆ, ಅದರ ನೇಮ್ ಸರ್ವರ್ ಮಾಹಿತಿಯು ಈ ರೀತಿ ಇರುತ್ತದೆ:

ns1.dns-parking.com
ns2.dns-parking.com

ಈ ನೇಮ್ ಸರ್ವರ್‌ಗಳು ನಿಮ್ಮ ಹೋಸ್ಟಿಂಗ್ ಕಂಪನಿಯಿಂದ ನಿರ್ವಹಿಸಲ್ಪಡುವ ಕಂಪ್ಯೂಟರ್‌ಗಳಾಗಿವೆ. ನಿಮ್ಮ ಹೋಸ್ಟಿಂಗ್ ಕಂಪನಿ ನಿಮ್ಮ ವೆಬ್‌ಸೈಟ್ ಸಂಗ್ರಹವಾಗಿರುವ ಕಂಪ್ಯೂಟರ್‌ಗೆ ನಿಮ್ಮ ವಿನಂತಿಯನ್ನು ರವಾನಿಸುತ್ತದೆ.

ಈ ಕಂಪ್ಯೂಟರ್ ಅನ್ನು ವೆಬ್ ಸರ್ವರ್ ಎಂದು ಕರೆಯಲಾಗುತ್ತದೆ. ಇದು ವಿಶೇಷ ಸಾಫ್ಟ್‌ವೇರ್ ಅನ್ನು ಹೊಂದಿದೆ (ಅಪಾಚೆ, ಎನ್‌ಜಿನ್ಎಕ್ಸ್ ಎರಡು ಜನಪ್ರಿಯ ವೆಬ್ ಸರ್ವರ್ ಸಾಫ್ಟ್‌ವೇರ್ ಗಳು). ವೆಬ್ ಸರ್ವರ್ ಈಗ ವೆಬ್ ಪಾಜ್ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯ ತುಣುಕುಗಳನ್ನು ಪಡೆಯುತ್ತದೆ.

ಅಂತಿಮವಾಗಿ, ಅದು ನಂತರ ಈ ಡೇಟಾವನ್ನು ಬ್ರೌಸರ್‌ಗೆ ಕಳುಹಿಸುತ್ತದೆ.

ಡೊಮೈನ್ ನೇಮ್ ಅನ್ನುವುದು ವೆಬ್ ಸೈಟ್ ಮತ್ತು ವೆಬ್ ಹೋಸ್ಟಿಂಗ್ ನಿಂದ ಹೇಗೆ ಬಿನ್ನವಾಗಿದೆ?

Untitled design 2 min 1 1 1 1 1 1 1 1 1 1 1 1 1 1
ವೆಬ್ ಹೋಸ್ಟಿಂಗ್

ವೆಬ್‌ಸೈಟ್ ಎನ್ನುವುದು HTML ಪೇಜ್ ಗಳು, ವೆಬ್‌ಸೈಟ್ ಬಿಲ್ಡರ್ ಸಾಫ್ಟ್‌ವೇರ್, ಚಿತ್ರಗಳು ಹಾಗೂ ಇನ್ನೂ ಹೆಚ್ಚಿನವುಗಳಿಂದ ಮಾಡಲ್ಪಟ್ಟಿರುತ್ತದೆ.

ಡೊಮೈನ್ ನೇಮ್ ನಿಮ್ಮ ವೆಬ್‌ಸೈಟ್‌ನ ವೆಬ್ ವಿಳಾಸವಾಗಿದ್ದರೆ, ವೆಬ್ ಹೋಸ್ಟಿಂಗ್ ನಿಮ್ಮ ವೆಬ್‌ಸೈಟ್ ವಾಸಿಸುವ ಮನೆಯಾಗಿದೆ.

ನಿಮ್ಮ ವೆಬ್‌ಸೈಟ್‌ನ ಫೈಲ್‌ಗಳನ್ನು ಸಂಗ್ರಹಿಸಲಾಗಿರುವ ನಿಜವಾದ ಕಂಪ್ಯೂಟರ್ ಇದು. ಅಂತಹ ಕಂಪ್ಯೂಟರ್‌ಗಳನ್ನು ಸರ್ವರ್‌ಗಳು ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ಹೋಸ್ಟಿಂಗ್ ಕಂಪನಿಗಳು ನಿಮಗೆ ಸರ್ವೀಸ್ ರೂಪದಲ್ಲಿ ನೀಡುತ್ತವೆ.

ನಿಮ್ಮ ವೆಬ್‌ಸೈಟ್ ರಚಿಸಲು , ನಿಮಗೆ ಡೊಮೈನ್ ನೇಮ್ ಮತ್ತು ವೆಬ್ ಹೋಸ್ಟಿಂಗ್ ಎರಡೂ ಅಗತ್ಯವಾಗಿವೆ.

ಆದಾಗ್ಯೂ, ಅವು ಎರಡೂ ಪ್ರತ್ಯೇಕ ಸೇವೆಗಳಾಗಿವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಮತ್ತು ನೀವು ಅವುಗಳನ್ನು ಎರಡು ವಿಭಿನ್ನ ಕಂಪನಿಗಳಿಂದ ಖರೀದಿಸಬಹುದು.

ಈಗ ನೀವು ಆಶ್ಚರ್ಯ ಪಡಬಹುದು, ನೀವು ಅವುಗಳನ್ನು ಎರಡು ಪ್ರತ್ಯೇಕ ಕಂಪನಿಗಳಿಂದ ಖರೀದಿಸಿದರೆ ಅದು ಹೇಗೆ ಕೆಲಸ ಮಾಡುತ್ತದೆ?

ನಿಮ್ಮ ಡೊಮೈನ್ ನೇಮ್ ಸೆಟ್ಟಿಂಗ್‌ಗಳನ್ನು ನೀವು ಎಡಿಟ್ ಮಾಡಬೇಕಾಗುತ್ತದೆ ಮತ್ತು ನಿಮ್ಮ ಹೋಸ್ಟಿಂಗ್ ಕಂಪನಿಯು ಒದಗಿಸಿದ ನೇಮ್ ಸರ್ವರ್ ಮಾಹಿತಿಯನ್ನು ನಮೂದಿಸಬೇಕು. ನೇಮ್ ಸರ್ವರ್ ಮಾಹಿತಿಯು ನಿಮ್ಮ ಡೊಮೇನ್ ನ ಬಳಕೆದಾರರ ವಿನಂತಿಗಳನ್ನು ಎಲ್ಲಿ ಕಳುಹಿಸಬೇಕು ಎಂದು ನಿರ್ಧರಿಸುತ್ತದೆ.

ನಿಮ್ಮ ಡೊಮೈನ್ ನೇಮ್ ಮತ್ತು ಹೋಸ್ಟಿಂಗ್ ಎರಡನ್ನೂ ಒಂದೇ ಕಂಪನಿಯಿಂದ ಪಡೆಯುವುದು ಉತ್ತಮ. ಯಾಕೆಂದರೆ ಒಂದೇ ಖಾತೆಯಡಿಯಲ್ಲಿ ಅವುಗಳನ್ನು ನೀವು ಸುಲಭವಾಗಿ ನಿರ್ವಹಿಸಬಹುದು.

ಡೊಮೈನ್ ನೇಮ್ ಗಳ ವಿಭಿನ್ನ ವಿಧಗಳು

ಡೊಮೈನ್ ನೇಮ್ ಗಳು ವಿಭಿನ್ನ ವಿಸ್ತರಣೆಗಳಲ್ಲಿ ಲಭ್ಯವಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು .com ಮತ್ತು ಇನ್ನಿತರ ಹಲವು ಆಯ್ಕೆಗಳಿವೆ. ಅವುಗಳೆಂದರೆ .Org, .net, .tv, .info, .io, .in, ಆದಾಗ್ಯೂ .com ಡೊಮೇನ್ ವಿಸ್ತರಣೆಯನ್ನು ಬಳಸಲು ನಾನು ಯಾವಾಗಲೂ ಶಿಫಾರಸು ಮಾಡುತ್ತೇನೆ.

ಲಭ್ಯವಿರುವ ಹಲವು ರೀತಿಯ ಡೊಮೇನ್ ಹೆಸರುಗಳ ಬಗ್ಗೆ ಹೆಚ್ಚು ವಿವರವಾಗಿ ನೋಡೋಣ.

ಉನ್ನತ ಮಟ್ಟದ ಡೊಮೈನ್ (ಟಾಪ್ ಲೆವೆಲ್ ಡೊಮೈನ್) – ಟಿಎಲ್‌ಡಿ

ಉನ್ನತ ಮಟ್ಟದ ಡೊಮೈನ್ ಅಥವಾ ಟಿಎಲ್‌ಡಿ ಸಾಮಾನ್ಯ ಡೊಮೈನ್ ವಿಸ್ತರಣೆಗಳಾಗಿದ್ದು ಅವು ಡೊಮೈನ್ ನೇಮ್ ವ್ಯವಸ್ಥೆಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಪಟ್ಟಿಮಾಡಲ್ಪಟ್ಟಿವೆ.

ನೂರಾರು ಟಿಎಲ್‌ಡಿಗಳಿವೆ, ಆದರೆ ಅತ್ಯಂತ ಜನಪ್ರಿಯವಾದವು .com,
.org, ಮತ್ತು .net. ಇತರ ಟಿಎಲ್‌ಡಿಗಳು ಹೆಚ್ಚು ಜನಪ್ರಿಯವಲ್ಲ ಮತ್ತು ಅವುಗಳನ್ನು ಬಳಸಲು ನಾನು ಶಿಫಾರಸು ಮಾಡುವುದಿಲ್ಲ. ಉದಾಹರಣೆಗೆ, .biz, .club, .info, .agency ಇತ್ಯಾದಿ.

ಕಂಟ್ರಿ ಕೋಡ್ ಉನ್ನತ ಮಟ್ಟದ ಡೊಮೇನ್ (ಕಂಟ್ರಿ ಕೋಡ್ ಟಾಪ್ ಲೆವೆಲ್ ಡೊಮೈನ್) – ಸಿಸಿಟಿಎಲ್ಡಿ

ಕಂಟ್ರಿ ಕೋಡ್ ಉನ್ನತ ಮಟ್ಟದ ಡೊಮೇನ್ ಅಥವಾ ಸಿಸಿಟಿಎಲ್ಡಿ ಎಂಬುದು ದೇಶದ ನಿರ್ದಿಷ್ಟ ಡೊಮೈನ್ ಹೆಸರುಗಳು. ಇದು ಯುನೈಟೆಡ್ ಕಿಂಗ್‌ಡಂಗೆ .uk, ಜರ್ಮನಿಗೆ .de, ಭಾರತಕ್ಕೆ .in ನಂತಹ ದೇಶದ ಕೋಡ್ ವಿಸ್ತರಣೆಯೊಂದಿಗೆ ಕೊನೆಗೊಳ್ಳುತ್ತದೆ.

ನಿರ್ದಿಷ್ಟ ದೇಶದಲ್ಲಿ ಪ್ರೇಕ್ಷಕರನ್ನು ಟಾರ್ಗೆಟ್ ಮಾಡಲು ಬಯಸುವ ವೆಬ್‌ಸೈಟ್‌ಗಳು ಅವುಗಳನ್ನು ಬಳಸುತ್ತವೆ.

ಪ್ರಾಯೋಜಿತ ಉನ್ನತ ಮಟ್ಟದ ಡೊಮೇನ್ (ಸ್ಪೊಂಸರ್ಡ್ ಟಾಪ್ ಲೆವೆಲ್ ಡೊಮೈನ್ )- ಎಸ್‌ಟಿಎಲ್‌ಡಿ

ಪ್ರಾಯೋಜಿತ ಉನ್ನತ ಮಟ್ಟದ ಡೊಮೇನ್ ಅಥವಾ ಎಸ್‌ಟಿಎಲ್‌ಡಿ ಎಂಬುದು ಟಿಎಲ್‌ಡಿಗಳ ಒಂದು ವರ್ಗವಾಗಿದೆ.

ಉದಾಹರಣೆಗೆ, ಶಿಕ್ಷಣ-ಸಂಬಂಧಿತ ಸಂಸ್ಥೆಗಳಿಗೆ .edu, ಸರ್ಕಾರಕ್ಕೆ .gov, ಮಿಲಿಟರಿಗೆ .mil ಇತ್ಯಾದಿ.

ಡೊಮೈನ್ ನೇಮ್ ವ್ಯವಸ್ಥೆಗೆ ಯಾರು ಜವಾಬ್ದಾರರು?

ಇಂಟರ್ನೆಟ್ ಕಾರ್ಪೊರೇಷನ್ ಫಾರ್ ಅಸೈಂಡ್ ನೇಮ್ ಆಂಡ್ ನಂಬರ್ಸ್ಸ್ (ICANN) ಇದು ಡೊಮೈನ್ ನೇಮ್ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಇದು ಲಾಭರಹಿತ ಸಂಸ್ಥೆಯಾಗಿದ್ದು ಡೊಮೈನ್ ಹೆಸರುಗಳಿಗಾಗಿ ನೀತಿಗಳನ್ನು ರಚಿಸುತ್ತದೆ ಮತ್ತು ಕಾರ್ಯಗತಗೊಳಿಸುತ್ತದೆ.

ಡೊಮೈನ್ ಹೆಸರುಗಳನ್ನು ಮಾರಾಟ ಮಾಡಲು ಡೊಮೈನ್ ನೇಮ್ ರಿಜಿಸ್ಟ್ರಾರ್ ಎಂಬ ಕಂಪನಿಗಳಿಗೆ ICANN ಅನುಮತಿ ನೀಡುತ್ತದೆ. ನಿಮ್ಮ ಪರವಾಗಿ ಡೊಮೈನ್ ಹೆಸರುಗಳ ನೋಂದಣಿಯಲ್ಲಿ ಬದಲಾವಣೆಗಳನ್ನು ಮಾಡಲು ಈ ಡೊಮೈನ್ ರಿಜಿಸ್ಟ್ರಾರ್‌ಗಳಿಗೆ ಅನುಮತಿಸಲಾಗಿದೆ.

ಡೊಮೈನ್ ನೇಮ್ ರಿಜಿಸ್ಟ್ರಾರ್ಸ್ ಡೊಮೈನ್ ಹೆಸರುಗಳನ್ನು ಮಾರಾಟ ಮಾಡಬಹುದು, ಅದರ ದಾಖಲೆಗಳನ್ನು ನಿರ್ವಹಿಸಬಹುದು, ನವೀಕರಣಗಳನ್ನು ನಿರ್ವಹಿಸಬಹುದು ಮತ್ತು ಇತರ ರಿಜಿಸ್ಟ್ರಾರ್‌ಗಳಿಗೆ ವರ್ಗಾವಣೆ ಮಾಡಬಹುದು.

ಡೊಮೈನ್ ಹೆಸರಿನ ಮಾಲೀಕರಾಗಿ, ವಿನಂತಿಗಳನ್ನು ಎಲ್ಲಿ ಕಳುಹಿಸಬೇಕು ಎಂದು ರಿಜಿಸ್ಟ್ರಾರ್‌ಗೆ ಹೇಳುವ ಜವಾಬ್ದಾರಿ ನಿಮ್ಮ ಮೇಲಿದೆ. ನಿಮ್ಮ ಡೊಮೈನ್ ನೋಂದಣಿಯನ್ನು ನವೀಕರಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ.

ನಿಮ್ಮ ವೆಬ್‌ಸೈಟ್‌ಗಾಗಿ ಡೊಮೈನ್ ಹೆಸರನ್ನು ಹೇಗೆ ಆರಿಸುವುದು?

ಡೊಮೈನ್ ಆಯ್ಕೆ
ಡೊಮೈನ್ ಆಯ್ಕೆ

ಪ್ರಸ್ತುತ 350 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಡೊಮೈನ್ ಹೆಸರುಗಳಿವೆ ಮತ್ತು ಪ್ರತಿದಿನ ಸಾವಿರಾರು ಜನರು ನೋಂದಾಯಿಸಿಕೊಳ್ಳುತ್ತಾರೆ.

ಇದರರ್ಥ ಎಲ್ಲಾ ಒಳ್ಳೆಯ ಡೊಮೈನ್ ಈಗಾಗಲೇ ನೋಂದಾಯಿಸಲಾಗಿದೆ ಅಥವಾ ಶೀಘ್ರದಲ್ಲೇ ನೋಂದಾಯಿಸಲಾಗುವುದು. ಹೊಸ ಬಳಕೆದಾರರು ತಮ್ಮ ವೆಬ್‌ಸೈಟ್‌ಗಾಗಿ ಡೊಮೈನ್ ನೇಮ್ ಹುಡುಕಲು ಕಷ್ಟವಾಗುತ್ತಿದೆ.

ನಿಮ್ಮ ಮುಂದಿನ ವೆಬ್‌ಸೈಟ್‌ಗಾಗಿ ಡೊಮೈನ್ ಹೆಸರನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ತ್ವರಿತ ಸಲಹೆಗಳು ಇಲ್ಲಿವೆ.

  • .Com ಡೊಮೈನ್ ಹೆಸರಿನೊಂದಿಗೆ ಅಂಟಿಕೊಳ್ಳಿ. ಏಕೆಂದರೆ ಅದು ಹೆಚ್ಚು ಜನಪ್ರಿಯವಾಗಿದೆ, ನೆನಪಿಟ್ಟುಕೊಳ್ಳಲೂ ಸುಲಭ ಮತ್ತು ಸುಲಭವಾಗಿ ಪ್ರಚಾರ ಮಾಡಬಹುದು.
  • ಚಿಕ್ಕದಾದ ಮತ್ತು ನೆನಪಿಟ್ಟುಕೊಳ್ಳಲು ಸುಲಭವಾದ ಡೊಮೈನ್ ನೇಮ್ ಆರಿಸಿ.
  • ಉಚ್ಚರಿಸಲು ಸುಲಭವಾಗಿರಬೇಕು.
  • ಸಂಖ್ಯೆಗಳು ಅಥವಾ ಹೈಫನ್‌ಗಳನ್ನು ಬಳಸಬೇಡಿ.
  • ಉತ್ತಮ ಡೊಮೈನ್ ಹೆಸರು ಆಯ್ಕೆ ಮಾಡಲು ಡೊಮೈನ್ ನೇಮ್ ಜನರೇಟರ್‌ಗಳನ್ನು ಬಳಸಿ.

ಡೊಮೈನ್ ಹೆಸರನ್ನು ಹೇಗೆ ಖರೀದಿಸುವುದು?

ನೀವು ಅನೇಕ ಡೊಮೈನ್ ನೇಮ್ ರಿಜಿಸ್ಟ್ರಾರ್‌ಗಳಲ್ಲಿ ಯಾವುದಾದರೂ ಒಂದರಿಂದ ಡೊಮೈನ್ ಹೆಸರುಗಳನ್ನು ಖರೀದಿಸಬಹುದು. ಡೊಮೇನ್ ಹೆಸರು ಸಾಮಾನ್ಯವಾಗಿ ವರ್ಷಕ್ಕೆ 1500 ರೂ. ಖರ್ಚಾಗುತ್ತದೆ. ಕೆಲವು ಜನಪ್ರಿಯ ಡೊಮೇನ್ ಹೆಸರನ್ನು ಮಾರಾಟ ಮಾಡುವ ಕಂಪನಿಗಳು:

  • GoDaddy
  • Hostinger
  • Neame cheape

ಆದಾಗ್ಯೂ ಡೊಮೈನ್ ಖರೀದಿಸುವುದು ನಿಮಗೆ ಹೋಸ್ಟಿಂಗ್ ಸೇವೆಯನ್ನು ಸ್ವಯಂಚಾಲಿತವಾಗಿ ನೀಡುವುದಿಲ್ಲ. ಅದಕ್ಕಾಗಿ, ನಿಮಗೆ ವೆಬ್‌ಸೈಟ್ ಹೋಸ್ಟಿಂಗ್ ಖಾತೆಯ ಅಗತ್ಯವಿರುತ್ತದೆ.

ಅನೇಕ ವರ್ಡ್ ಪ್ರೆಸ್ ಹೋಸ್ಟಿಂಗ್ ಕಂಪನಿಗಳು ಡೊಮೈನ್ ನೋಂದಣಿ ಸೇವೆಗಳನ್ನು ಸಹ ನೀಡುತ್ತವೆ. ಎರಡೂ ಖಾತೆಗಳನ್ನು ಒಂದೇ ಖಾತೆಯಡಿಯಲ್ಲಿ ನಿರ್ವಹಿಸಲು ನಿಮಗಿದು ಸಹಕಾರಿ ಮತ್ತು ನಿಮ್ಮ ಡೊಮೈನ್ ಗಾಗಿ ನೇಮ್ ಸರ್ವರ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಬಗೆಗೆ ನೀವು ಚಿಂತಿಸಬೇಕಾಗಿಲ್ಲ.

ನೀವು ಬಿಗಿನರ್ ಆಗಿದ್ದರೆ ನಾನು ನಿಮಗೆ ಶಿಫಾರಸ್ಸು ಮಾಡುವುದು Hostinger . ಅವರು Digiseve ಬಳಕೆದಾರರಿಗೆ ಉಚಿತ ಡೊಮೈನ್ ಹೆಸರು ಮತ್ತು Promo Code: DIGISEVE ಬಳಸುವುದರಿಂದ ಹೋಸ್ಟಿಂಗ್‌ನಲ್ಲಿ ಹೆಚ್ಚುವರಿ 10% ರಿಯಾಯಿತಿ ನೀಡುತ್ತಿದ್ದಾರೆ. ಇಲ್ಲಿ ನೀವು ತಿಂಗಳಿಗೆ 75 ರೂ.ಗಳಿಂದ ಪ್ರಾರಂಭಿಸಬಹುದು.

ಡೊಮೈನ್ ನೇಮ್ ಗಳ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ನಾನು ಹಲವು ಆರಂಭಿಕರಿಗೆ ತಮ್ಮ ಮೊದಲ ವೆಬ್‌ಸೈಟ್‌ಗಳನ್ನು ಪ್ರಾರಂಭಿಸಲು ಸಹಾಯ ಮಾಡಿದ್ದೇನೆ. ನೀವು ಯೋಚಿಸಬಹುದಾದ ಡೊಮೇನ್ ಹೆಸರುಗಳ ಬಗ್ಗೆ ಸಾಧ್ಯವಿರುವ ಎಲ್ಲ ಪ್ರಶ್ನೆಗಳನ್ನು ನಾನು ಕೇಳಿದ್ದೇನೆ.

ಡೊಮೈನ್ ಹೆಸರುಗಳ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಕೆಲವು ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ.

1.ಸಬ್‌ಡೊಮೈನ್ ಎಂದರೇನು?

ಸಬ್‌ಡೊಮೈನ್ ಮೂಲತಃ ಮುಖ್ಯ ಡೊಮೈನ್ ಹೆಸರಿನಲ್ಲಿ ಚೈಲ್ಡ್ ಡೊಮೈನ್ ಆಗಿದೆ. ಉದಾಹರಣೆಗೆ, store.digiseve.com ಎಂಬುದು digiseve.com ನ ಸಬ್‌ಡೊಮೈನ್ ಆಗಿದೆ.

ಒಮ್ಮೆ ನೀವು ಡೊಮೈನ್ ಅನ್ನು ನೋಂದಾಯಿಸಿದ ನಂತರ, ಅದಕ್ಕಾಗಿ ಸಬ್‌ಡೊಮೈನ್ ಗಳನ್ನು ನೀವೇ ರಚಿಸಲು ನಿಮಗೆ ಅನುಮತಿ ಇರುತ್ತದೆ.

ಒಂದೇ ಡೊಮೈನ್ ಹೆಸರಿನಲ್ಲಿ ಚೈಲ್ಡ್ ಸೈಟ್‌ಗಳನ್ನು ರಚಿಸಲು ವೆಬ್‌ಸೈಟ್‌ಗಳು ಸಾಮಾನ್ಯವಾಗಿ ಸಬ್‌ ಡೊಮೈನ್ ಗಳನ್ನು ಬಳಸುತ್ತವೆ. ಉದಾಹರಣೆಗೆ, ಬಿಸಿನೆಸ್ ವೆಬ್‌ಸೈಟ್ ತಮ್ಮ ಬ್ಲಾಗ್ ಅಥವಾ ಅವರ ಆನ್‌ಲೈನ್ ಸ್ಟೋರ್‌ಗಾಗಿ store.example.com ಅಥವಾ blog.example.com ಆಗಿ ಸಬ್‌ಡೊಮೈನ್ ಅನ್ನು ರಚಿಸಬಹುದು.

2.ಡೊಮೈನ್ ಹೆಸರಿನ ನನ್ನ ನೋಂದಣಿಯನ್ನು ನಾನು ರದ್ದುಗೊಳಿಸಬಹುದೇ?

ಕೆಲವು ಡೊಮೈನ್ ರಿಜಿಸ್ಟ್ರಾರ್‌ಗಳು ನಿಮ್ಮ ಡೊಮೈನ್ ನೋಂದಣಿಯನ್ನು ಯಾವುದೇ ಸಮಯದಲ್ಲಿ ರದ್ದುಗೊಳಿಸಲು ನಿಮಗೆ ಅನುಮತಿಸುತ್ತವೆ. ನಿಮ್ಮ ನೋಂದಣಿಯನ್ನು ನೀವು ರದ್ದುಗೊಳಿಸಿದರೆ ಇತರರು ನೋಂದಾಯಿಸಲು ಇದು ಲಭ್ಯವಾಗುತ್ತದೆ.

ನೀವು ಸ್ವಯಂ-ನವೀಕರಣ ವೈಶಿಷ್ಟ್ಯವನ್ನು ಆನ್ ಮಾಡದಿದ್ದರೆ, ನೀವು ಪಾವತಿಸಿದ ನೋಂದಣಿ ಅವಧಿಯ ನಂತರ ನಿಮ್ಮ ಡೊಮೈನ್ ನೇಮ್ ಮುಕ್ತಾಯಗೊಳ್ಳುತ್ತದೆ.

3.ನನ್ನ ವೆಬ್‌ಸೈಟ್ ಅನ್ನು ಬೇರೆ ಡೊಮೈನ್ ನೇಮ್ ಗೆ ಸರಿಸಬಹುದೇ?

ಹೌದು, ನೀವು ಮಾಡಬಹುದು. ನಿಮ್ಮ ಡೊಮೈನ್ ಹೆಸರನ್ನು ನಿಮ್ಮ ಹೋಸ್ಟಿಂಗ್ ಸರ್ವರ್‌ಗೆ ಸೂಚಿಸಬಹುದು. ನೀವು ಎರಡೂ ಡೊಮೇನ್ ಹೆಸರುಗಳನ್ನು ಒಂದೇ ವೆಬ್‌ಸೈಟ್‌ಗೆ ತೋರಿಸಬಹುದು.

ಆದಾಗ್ಯೂ ಸರ್ಚ್ ಇಂಜಿನ್ಗಳು ಇದನ್ನು ನಕಲಿ ವಿಷಯವೆಂದು ಪರಿಗಣಿಸುತ್ತವೆ ಮತ್ತು ಅದು ನಿಮ್ಮ ಸರ್ಚ್ ರಾಂಕಿಂಗ್ ಮೇಲೆ ಪರಿಣಾಮ ಬೀರುತ್ತದೆ.

4.ನಾನು ಡೊಮೈನ್ ಹೆಸರನ್ನು ಮಾರಾಟ ಮಾಡಬಹುದೇ?

ಹೌದು, ನಿಮ್ಮ ಡೊಮೈನ್ ಹೆಸರನ್ನು ನೀವು ಮಾರಾಟ ಮಾಡಬಹುದು. ಡೊಮೈನ್ ಹೆಸರುಗಳು ವೆಬ್‌ಗೆ ರಿಯಲ್ ಎಸ್ಟೇಟ್ನಂತಿದೆ. ಉತ್ತಮ ಬ್ರಾಂಡಬಲ್ ಕಸ್ಟಮ್ ಡೊಮೈನ್ ಹೆಸರುಗಳಿಗೆ ಭಾರಿ ಬೇಡಿಕೆಯಿದೆ.

ಡೊಮೈನ್ ಹೆಸರುಗಳನ್ನು ವ್ಯಾಪಾರ ಮಾಡುವುದು ಬಹು-ಮಿಲಿಯನ್ ಡಾಲರ್ ಉದ್ಯಮವಾಗಿದೆ. ಡೊಮೈನ್ ಹೆಸರುಗಳು ತುಂಬಾ ಅಗ್ಗವಾಗಿರುವುದರಿಂದ, ಸ್ಮಾರ್ಟ್ ಉದ್ಯಮಿಗಳು ಯಾವಾಗಲೂ ಉತ್ತಮ ಡೊಮೈನ್ ಹೆಸರನ್ನು ಹುಡುಕುತ್ತಿರುತ್ತಾರೆ.

ನಿಮ್ಮ ಡೊಮೈನ್ ಹೆಸರನ್ನು ಮಾರಾಟ ಮಾಡಲು ಬಯಸಿದರೆ, ಮಾರುಕಟ್ಟೆ ಜಾಲತಾಣಗಳೆಂದರೆ Sedo, GoDaddy ನಂತಹ ಇನ್ನು ಹಲವು ವೆಬ್ಸೈಟ್ ಗಳಿವೆ ಇಲ್ಲಿ ನೀವು ನಿಮ್ಮ ಡೊಮೈನ್ ನೇಮ್ ಲಿಸ್ಟ್ ಮಾಡಿದರೆ ಸಾಕು.

5.ಡೊಮೈನ್ ಗೌಪ್ಯತೆ ಎಂದರೇನು? ನನಗೆ ಇದು ಅಗತ್ಯವಿದೆಯೇ?

ಡೊಮೈನ್ ಹೆಸರುಗಳನ್ನು ನೋಂದಾಯಿಸುವ ICANNಯು ಜನರ ಇಮೇಲ್, ಭೌತಿಕ ವಿಳಾಸ, ಫೋನ್ ಸಂಖ್ಯೆ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಪಡೆಯುತ್ತದೆ. ಇದು ಸಾರ್ವಜನಿಕವಾಗಿ ಲಭ್ಯವಾಗುತ್ತವೆ.

ಡೊಮೈನ್ ಗೌಪ್ಯತೆ ಎನ್ನುವುದು ಡೊಮೈನ್ ರಿಜಿಸ್ಟ್ರಾರ್‌ಗಳು ಮಾರಾಟ ಮಾಡುವ ಪ್ರತ್ಯೇಕ ಆಡ್-ಆನ್ ಸೇವೆಯಾಗಿದೆ. ನಿಮ್ಮ ನಿಜವಾದ ವೈಯಕ್ತಿಕ ಮಾಹಿತಿಯ ಬದಲು ಪ್ರಾಕ್ಸಿ ಮಾಹಿತಿಯನ್ನು ತೋರಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

ನೀವು ಬಯಸದಿದ್ದರೆ ನೀವು ಡೊಮೈನ್ ಗೌಪ್ಯತೆಯನ್ನು ಖರೀದಿಸುವ ಅಗತ್ಯವಿಲ್ಲ. ಆದಾಗ್ಯೂ ನಿಮಗೆ ಗೌಪ್ಯತೆ ಮುಖ್ಯವಾಗಿದ್ದರೆ, ನೀವು ಈ ಸೇವೆಯನ್ನು ಸಣ್ಣ ವೆಚ್ಚಕ್ಕೆ ಖರೀದಿಸಬಹುದು.

6.ನಾನು ಒಂದಕ್ಕಿಂತ ಹೆಚ್ಚು ಡೊಮೈನ್ ಹೆಸರನ್ನು ಖರೀದಿಸಬಹುದೇ?

ಹೌದು, ನೀವು ಇಷ್ಟಪಡುವಷ್ಟು ಡೊಮೈನ್ ಹೆಸರುಗಳನ್ನು ನೀವು ಖರೀದಿಸಬಹುದು.

7.ವೆಬ್‌ಸೈಟ್‌ಗಳನ್ನು ತಯಾರಿಸುವ ಬಗ್ಗೆ ನಾನು ಎಲ್ಲಿ ಹೆಚ್ಚು ಕಲಿಯಬಹುದು?

ಇಲ್ಲಿಯೇ. Disiseve ನಿಮಗೆ ಕನ್ನಡದಲ್ಲಿ ವೆಬ್ಸೈಟ್ ಬಗ್ಗೆ ಕಲಿಯಲು ಉತ್ತಮ ತಾಣವಾಗಿದೆ.

ಡೊಮೈನ್ ಹೆಸರು ಎಂದರೇನು ಮತ್ತು ಡೊಮೈನ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯಲು ಈ ಲೇಖನ ನಿಮಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಕೆಲವರಿಗೆ ಇದು ಸ್ವಲ್ಪ ಟೆಕ್ನಿಕಲ್ ಅನಿಸಿರಬಹುದು ಆದರೂ ನಿಮಗೆ ವೆಬ್ಸೈಟ್ ರಚಿಸುವ ಮೊದಲು ಇಂತಹ ವಿಷಯಗಳು ಬೆಸ್ಟ್ ಡೊಮೈನ್ ನೇಮ್ ಸೆಲೆಕ್ಟ್ ಮಾಡಲು ಸಹಾಯವಾಗುತ್ತೆ.

ನೀವು ಈ ಲೇಖನವನ್ನು ಇಷ್ಟಪಟ್ಟರೆ, ದಯವಿಟ್ಟು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮಗೆ ಏನೇ ವೆಬ್ಸೈಟ್ ಬಗ್ಗೆ ಸಂದೇಹ ಇದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Leave a Comment