ವರ್ಡ್ ಪ್ರೆಸ್ ಗೈಡ್: ಯಾಕೆ ವರ್ಡ್ ಪ್ರೆಸ್ ಎಲ್ಲಕಿಂತ ಉತ್ತಮ?

ಡಿಜಿಸೇವೆ ವೆಬ್ ಸೈಟ್ ಗೈಡ್ ನ ಎರಡನೇ ಅಧ್ಯಾಯದಲ್ಲಿ ಯಾಕೆ “ಯಾಕೆ ವರ್ಡ್ ಪ್ರೆಸ್ ಎಲ್ಲಕಿಂತ ಉತ್ತಮ?” ಎಂಬ ವಿಷಯದ ಕುರಿತು ತಿಳಿದುಕೊಳ್ಳೋಣ. ಜಗತ್ತಿನಲ್ಲಿ ಹೆಚ್ಚಿನ ವೆಬ್ ಸೈಟ್ ಗಳು ವರ್ಡ್ ಪ್ರೆಸ್ ಮೂಲಕವೇ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಲಿದೆ.

vegan ingredients min min
wordpress

ವರ್ಡ್ ಪ್ರೆಸ್ ಯಾಕೆ ಉತ್ತಮ ?

 • ಇದನ್ನು ತುಂಬಾ ಸುಲಭವಾಗಿ ಉಪಯೋಗಿಸಬಹುದು.
 • ಇದು ಸರಳ ಯೂಸರ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಹೊಂದಿದೆ.
 • ಇದನ್ನು ಇನ್ ಸ್ಟಾಲ್ ಮಾಡಿದ ತಕ್ಷಣ ಇದನ್ನು ಉಪಯೋಗಿಸ ಬಹುದು.
 • ಇದನ್ನು ಬಳಕೆ ಮಾಡಲು ಹೆಚ್ಚಿನ ತಾಂತ್ರಿಕ ಜ್ಞಾನದ ಆಗತ್ಯವಿಲ್ಲ.
 • ವರ್ಡ್ ಪ್ರೆಸ್ ಮೂಲಕ ವೆಬ್ ಸೈಟ್ ರಚಿಸಲು ಪ್ರೋಗಮಿಂಗ್, ಕೋಡಿಂಗ್ ಜ್ಞಾನ ಬೇಕಾಗಿಲ್ಲ.
 • ಇದರಲ್ಲಿ ಸುಲಭವಾಗಿ ಕಂಟೆಂಟ್ ಬರೆದು ಪೋಸ್ಟ್ ಮಾಡಬಹುದು.
 • ವೆಬ್ ಸೈಟ್ ಸೆಟಪ್ ಮಾಡಲು ಜಾವಾಸ್ಕ್ರಿಪ್ಟ್, ಪಿಎಚ್ ಪಿ ಗಳ ಜ್ಞಾನ ಬೇಕಾಗಿಲ್ಲ.
 • ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಹೊಸ ಆವೃತ್ತಿಗೆ ಅಪ್ಡೇಟ್ ಮಾಡಬಹುದು.
 • ಕಡಿಮೆ ಖರ್ಚಿನಲ್ಲಿ ಸುಂದರ ವೆಬ್ ಸೈಟ್ ರಚಿಸಬಹುದು.
 • ಸಾಕಷ್ಟು ಉಚಿತ ಥೀಮ್ ಮತ್ತು ಪ್ಲಗಿನ್ ಗಳು ವರ್ಡ್ ಪ್ರೆಸ್ ನಲ್ಲಿ ಲಭ್ಯವಿದೆ.
 • 3ರಿಂದ 5 ಸಾವಿರ ರೂ.ಗೆ ಪ್ರೀಮಿಯಂ ಥೀಮ್ ಮತ್ತು ಪ್ಲಗಿನ್ ಗಳು ಸಿಗುತ್ತವೆ. ಪ್ರೀಮಿಯಂ ಥೀಮ್ ಮತ್ತು ಪ್ಲಗಿನ್ ಗಳನ್ನು ಉಪಯೋಗಿಸಿಕೊಂಡು ಉತ್ತಮವಾಗಿ ವೆಬ್ ಸೈಟ್ ವಿನ್ಯಾಸ ಮಾಡಬಹುದು.
 • ಇ ಕಾಮರ್ಸ್ ವೆಬ್ ಸೈಟ್ ಗಳನ್ನು  ವರ್ಡ್ ಪ್ರೆಸ್ ನಲ್ಲಿ ವೂ ಕಾಮರ್ಸ್ (woocommerce) ಮೂಲಕ ತುಂಬಾ ಸರಳವಾಗಿ ರಚಿಸಬಹುದು.
 • ಒಂದು ವರ್ಡ್ ಪ್ರೆಸ್ ವೆಬ್ ಸೈಟ್ ನಲ್ಲಿ ಏಷ್ಟು ಬಳಕೆದಾರರು ಕೂಡ ಬಳಸಬಹುದು. ಇಲ್ಲಿ ಲೇಖಕರಿಗೆ ಸಬ್ಸ್ ಕ್ರೈಬೇರ್, ಕಾಂಟ್ರಿಬ್ಯೂಟೆರ್, ಆಥಾರ್, ಎಡಿಟರ್, ಅಡ್ಮಿನ್ ಹೀಗೆ ಹಲವು ರೋಲ್ ಗಳನ್ನು ನೀಡಬಹುದು.
 •  ತುಂಬಾ ಕಡಿಮೆ ಖರ್ಚಿನಲ್ಲಿ ವರ್ಡ್ ಪ್ರೆಸ್ ವೆಬ್ ಸೈಟ್ ಅನ್ನು ನಿರ್ವಹಣೆ ಮಾಡಬಹುದು. ವರ್ಷಕ್ಕೊಮ್ಮೆ ಹೋಸ್ಟಿಂಗ್ ಹಾಗೂ ನಿಮ್ಮ ಡೊಮೈನ್ ರಿನಿವಲ್ ಮಾಡಿದರೆ ಸಾಕು.
 •  ನಿಮಗೆ ಬೇಕಾದ ರೀತಿಯಲ್ಲಿ ಬ್ಲಾಗಿಂಗ್ ವೆಬ್ ಸೈಟ್ ರಚಿಸಬಹುದು. ಯಾವುದೇ ರೀತಿಯ ಕೋಡಿಂಗ್ ಬೇಕಾಗಿಲ್ಲ.
 • ವರ್ಡ್ ಪ್ರೆಸ್ ನಲ್ಲಿ ಸಪೋರ್ಟಿಂಗ್ ಕಮ್ಯುನಿಟಿ ಇದೆ. ನಿಮಗೆ ವೆಬ್ ಸೈಟ್ ನಿರ್ಮಿಸುವಾಗ ಯಾವುದೇ ಸಂದೇಹ ಇದ್ದರೆ ಸುಲಭವಾಗಿ ಬಗೆಹರಿಸಿಕೊಳ್ಳಬಹುದು.
 • ವರ್ಡ್ ಪ್ರೆಸ್ ಓಪನ್ ಸೋರ್ಸ್ ಸಾಫ್ಟ್ ವೇರ್ ಆಗಿದೆ. ಅಂದರೆ ಇದು ಮುಕ್ತ ತಂತ್ರಾಂಶವಾಗಿರುವುದರಿಂದ ಸಾಕಷ್ಟು ಅಪ್ಡೇಟ್ ಗಳು ಹೊಸ ಫೀಚರಸ್ ಗಳು ಸಿಗುತ್ತವೆ.
 • ವರ್ಡ್ ಪ್ರೆಸ್ ವೆಬ್ ಸೈಟ್ ಗಳನ್ನು ನಾವು ಬಹಳ ಸುಲಭವಾಗಿ ಎಡಿಟ್ ಮಾಡಬಹುದು.
 • ವರ್ಡ್ ಪ್ರೆಸ್ ವೆಬ್ ಸೈಟ್ ಗಳ ಬ್ಯಾಕೆಂಡ್ ಡ್ಯಾಶ್ ಬೋರ್ಡ್ ತುಂಬಾ ಸರಳ. ಯಾರು ಬೇಕಾದರೂ ಯಾರು ಬೇಕಾದರೂ ತುಂಬಾ ಸುಲಭವಾಗಿ ಕಲಿಯಬಹುದು.
 • ನೀವು ಫೋಟೋ, ಪಿಡಿಎಫ್ ಅಥವಾ ಇನ್ನಾವುದೇ ಫೈಲ್ ಗಾಳನ್ನು ಸುಲಭವಾಗಿ ಅಪ್ಲೋಡ್ ಮಾಡಬಹುದು.
 • ನಿಮ್ಮ ಪ್ರತಿಯೊಂದು ಅವಶ್ಯಕತೆಗೆ ತಕ್ಕಂತೆ ಪ್ಲಗಿನ್ ಗಳು ಸಿಗುತ್ತವೆ.ಅವುಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಬಹುದು.
 • ನಿಮಗೆ ಬೇಕಾದ ರೀತಿಯಲ್ಲಿ ಹೊಮ್ ಪೇಜ್ ಡಿಸೈನ್ ಮಾಡಬಹುದು.
 • ನೀವು ಸುಲಭವಾಗಿ ಯೂಟ್ಯೂಬ್ ಹಾಗೂ ಇತರೆ ವಿಡಿಯೋಗಳನ್ನು ನಿಮ್ಮ ಸೈಟ್ ಗೆ ಎಂಬೆಡ್ ಮಾಡಬಹುದು.
 • ಇತ್ತೀಚೆಗೆ ವರ್ಡ್ ಪ್ರೆಸ್ ವೆಬ್ ಸೈಟ್ ನಲ್ಲಿ ಗುಟೆನ್ ಬರ್ಗ್ ಹೊಸ ಅಪ್ಡೇಟ್ ಬಂದಿದ್ದು, ಇದರ ಮೂಲಕ ನಿಮಗೆ ಬೇಕಾದ ರೀತಿಯಲ್ಲಿ ಆರ್ಟಿಕಲ್ ಸುಂದರವಾಗಿ ಬರೆಯಬಹುದು.
 • ನಿಮ್ಮ ವೆಬ್ ಸೈಟ್ ನ ಸುರಕ್ಷತೆ ಹೆಚ್ಚಿಸಲು ಹಲವಾರು ಉಚಿತ ಪ್ಲಗಿನ್ ಗಳು ಲಭ್ಯವೀದೆ. ನಾನು ನಿಮಗೆ ವರ್ಡ್ ಫೆನ್ಸ್ ಬಳಸಲು ಶಿಫಾರಸ್ಸು ಮಾಡುತ್ತೇನೆ.
 • ಆಕಿಸ್ಮಿತ್ ನಂತಹ ಪ್ಲಗಿನ್ ಉಪಯೋಗಿಸಿ ನಾವು ಸ್ಪ್ಯಾಮ್ ಕಾಮೆಂಟ್ ಗಳಿಂದ ಪಾರಾಗಬಹುದು.
 • ವೆಬ್ ಸೈಟ್ ಗಳು ಕೆಲವೊಮ್ಮೆ ಕ್ರ್ಯಾಶ್ ಆಗಬಹುದು. ಇಂತಹ ಸಮಯದಲ್ಲಿ ನಮ್ಮ ಬಳಿ ಬ್ಯಾಕಪ್ ಇದ್ದರೆ ಸುಲಭವಾಗಿ ವೆಬ್ ಸೈಟ್ ಅನ್ನು ಮೊದಲಿನ ಹಾಗೆ ಮಾಡಬಹುದು. ಇದಕ್ಕಾಗಿ ವರ್ಡ್ ಪ್ರೆಸ್ ನಲ್ಲಿ ಅನೇಕ ಪ್ಲಗಿನ್ ಗಳು ಸಿಗುತ್ತವೆ. ನಾನು ಶಿಫಾರಸ್ಸು ಮಾಡೋದು ಅಪ್ ಡ್ರಾಫ್ಟ್.
 • ನಿಮ್ಮ ವೆಬ್ ಸೈಟ್ ಗೆ ಸುಲಭವಾಗಿ ಎಸ್ ಎಸ್ ಎಲ್ ಸರ್ಟಿಫಿಕೇಟ್ ಅಳವಡಿಸಿಕೊಳ್ಳಬಹುದು. ನಿಮಗೆ ಉಚಿತ ಹಾಗೂ ಪೈಡ್ ಎಸ್ಎಸ್ಎಲ್ ಸರ್ಟಿಫಿಕೇಟ್ ಸಿಗುತ್ತವೆ.
 • ನಿಮ್ಮ ವೆಬ್ ಸೈಟ್ ಈಗ ಎಸ್ ಇ ಒ (SEO) ತುಂಬಾ ಅವಶ್ಯಕ. ಎಸ್ ಇ ಒ ಉತ್ತಮವಾಗಿದ್ದರೆ ಮಾತ್ರ ನಿಮ್ಮ ವೆಬ್ ಸೈಟ್ ಗೂಗಲ್ ನಲ್ಲಿ ಉತ್ತಮ ರ್ಯಾಂಕ್ ಪಡೆಯಬಹುದು. ನಿಮ್ಮ ಆರ್ಟಿಕಲ್ ನಲ್ಲಿ ಎಸ್ ಇ ಒ ಹೆಚ್ಚಿಸಲು ಯೋಸ್ಟ್, ರ್ಯಾಂಕ್ ಮ್ಯಾತ್ ನಂತಹ ಪ್ಲಗಿನ್ ಗಳು ಸಿಗುತ್ತವೆ.
 • ವರ್ಡ್ ಪ್ರೆಸ್ ವೆಬ್ ಸೈಟ್ ಗಳು ತುಂಬಾ ರೆಸ್ಪಾನ್ಸಿವ್ ವಿನ್ಯಾಸವನ್ನು ಹೊಂದಿರುತ್ತವೆ. ಇದು ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಹೀಗೆ ಎಲ್ಲದಕ್ಕೂ ಹೊಂದಿಕೊಳ್ಳುತ್ತದೆ.
 • ಇದು ಎಲ್ಲಾ ವೆಬ್ ಬ್ರೌಸರ್ ಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
 • ಈಗ ಸ್ಮಾರ್ಟ್ ಫೋನ್ ಎಲ್ಲರ ಬಲಿ ಇರುತ್ತದೆ. ನೀವು ಮೊಬೈಲ್ ನಲ್ಲಿ ಕೂಡ ವರ್ಡ್ ಪ್ರೆಸ್ ವೆಬ್ ಸೈಟ್ ಗಳನ್ನು ರಚಿಸಬಹುದು. ಮೊಬೈಲ್ ನಲ್ಲಿ ವೆಬ್ ಸೈಟ್ ಮ್ಯಾನೇಜ್ ಮಾಡುವುದು ಸ್ವಲ್ಪ ಕಷ್ಟ. ನಿಮ್ಮ ಬಳಿ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಇದ್ದರೆ ಉತ್ತಮ.

ಹೀಗೆ ವರ್ಡ್ ಪ್ರೆಸ್ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ಹಲವು ಪಾಯಿಂಟ್ ಗಳನ್ನು ಪಟ್ಟಿ ಮಾಡಬಹುದು. ಸದ್ಯಕ್ಕೆ ಇಷ್ಟು ಸಾಕು ಮುಂದಿನ ಅಧ್ಯಯನದಲ್ಲಿ ಹೆಚ್ಚಿಗೆ ತಿಳಿದುಕೊಳ್ಳೋಣ. ನಿಮಗೆ ಈ ಆರ್ಟಿಕಲ್ ಇಷ್ಟವಾಗಿದ್ದರೆ ನಿಮ್ಮ ಗೆಳೆಯರ ಜೊತೆ ಶೇರ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯ ಅಥವಾ ನಿಮಗೇನಾದ್ರೂ ಸಂದೇಹ ಇದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

ವೆಬ್ ಸೈಟ್ ಗೈಡ್ ನ ಮುಂದಿನ ಲೇಖನದಲ್ಲಿ ನಾವು ಡೊಮೈನ್ ನೇಮ್ ಬಗ್ಗೆ ತಿಳಿಯೋಣ.

Leave a Comment