ಹೊಸತನದತ್ತ ಸಾಗುತಿದೆ ಭಾರತೀಯ ಅಂಚೆ ಇಲಾಖೆ…

ಕಳೆದ ವಾರದಿಂದ ನಮ್ಮ(ಅಂಚೆ) ಇಲಾಖೆಯಲ್ಲಿ ತರಾತುರಿಯ ಕಾರ್ಯಗಳು 14 ತಾರೀಖಿನ ಒಳಗಡೆ ಬಾಕಿ ಇರುವ ಎಲ್ಲಾ ಕಾರ್ಯಗಳನ್ನು ಮುಗಿಸಬೇಕು.. ಸ್ವಲ್ಪ ದಿನದ ಹಿಂದೆ ಅಷ್ಟೆ ವಾರ್ಷಿಕ ಲೆಕ್ಕವನ್ನು ಮುಗಿಸಿ ಹೊಸ ಅರ್ಥಿಕ ವರ್ಷದತ್ತ ಸಾಗುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ದರ್ಪಣ್ ಡಿವೈಸ್ ಅಲ್ಲಿ ಹೊಸತೇನೋ ಅಪ್ಡೇಟ್ ಆಗುತ್ತೆ ಅನ್ನೋ ಮೆಸೆಜ್ ಗಳು ಗ್ರೂಪ್ ಗಳಲ್ಲಿ ಬರತೊಡಗಿದವು.
ಮೂರು ದಿನ ಶಾಖಾ ಅಂಚೆ ಕಚೇರಿಗಳಲ್ಲಿ ಯಾವುದೇ ವ್ಯವಹಾರಗಳು ನಡೆಸಬಾರದು ಎಂದು ಮೇಲಾಧಿಕಾರಿಗಳಿಂದ ಸೂಚನೆಗಳು ಬಂದವು.
ನಮಗೋ ಬಿಪಿಎಂಗಳಿಗೆ ದೊಡ್ಡ ಬಂಡೆಕಲ್ಲೇ ತಲೆಗೆ ಬಂದು ಬಿದ್ದ ಹಾಗೇ ಏಕೆಂದರೆ ಈ ಸರ್ಕಾರ ದ ಎಲ್ಲಾ ದುಡ್ಡುಗಳೂ ಅಂಚೆ ಕಚೇರಿಗಳಿಗೆ ಬಂದು ಬೀಳುತ್ತಿರುವುದರಿಂದ BO ಗಳಲ್ಲಿ ಪುರುಸೊತ್ತು ಇಲ್ಲದ ಸಮಯ .. ಅದೂ ಇವರು updation ಗೆ ಹೇಳಿದ ಸಮಯವಂತೂ ಇನ್ನೂ ಒಳ್ಳೇದೇ ಇತ್ತು . ಸರಿಯಾಗಿ 8 , 12, 13 ತಾರೀಕಿಗೆ ತಿಂಗಳ ಪಿಂಚಣಿ, ಗೃಹಲಕ್ಷ್ಮಿ, ಅನ್ನಭಾಗ್ಯ ಎಲ್ಲದರ ದುಡ್ಡು ಜನರ ಅಕೌಂಟ್ ಗಳಲ್ಲಿ.. ಬೆಳಗ್ಗೆ ಬೆಳಗ್ಗೆ ನಾವು ಪೋಸ್ಟ್ ನ ಬಾಗಿಲು ತೆರೆಯುವ ಮೊದಲು ಜನರು ಅಂಚೆ ಕಚೇರಿಯಲ್ಲಿ ಹಾಜರ್. ಎನ್ನ ಒಂಜಿ ಕಾಸ್ ಡೆತ್ದ್ ಕೊರ್ಲೆ, ಎನ್ಕ್ ಅರಿತ್ತ ಬೊಕ್ಕ ಗೃಹಲಕ್ಷ್ಮೀ ದ ಮಾತ್ರಾ ಯಾರು, ಅವೆನ್ಲ ಬೇತೆ ಬೇತೆ ನೆ ಪಾಲ್ ಕಟ್ ದ್ ಕೊರ್ಲೆ ಅನ್ನೋ ಗ್ರಾಹಕರು.. ಅದಕ್ಕೆ ಸರಿಯಾಗಿ ಮೂರು ದಿನ ವ್ಯವಹಾರ ಇಲ್ಲದೇ ಇರುವುದು. ಒಂದು ಕಡೆ ಕೆಲಸ ಇಲ್ಲ ಆರಾಮ ಅಂತ ಉಸಿರು ಬಿಡಲು ಆಗ್ದೆ ಇರೋ ಸ್ಥಿತಿ ಏಕೆಂದರೆ ಜನ್ರ ಪ್ರಶ್ನೆಗಳೇ ನೂರು , ಎಷ್ಟೇ ಅರ್ಥೈಸಲು ಹೋದರೂ ನಾವೇ ಕೊನೆಗೆ ಬಾಯಿ ಮುಚ್ಚಿ ಕೂರುವ ಪರಿಸ್ಥಿತಿ ಈ ಶಾಖಾ ಅಂಚೆ ಪಾಲಕರಿಗೆ…
ಅಂತೂ ಇಂತೂ 18 ತಾರೀಖು ಬಂದೆ ಬಿಟ್ಟಿತು, ಹಿಂದಿನ ದಿನ SSP, SA, ASP ಎಲ್ಲರಿಂದ ಎಲ್ಲಾ ಗ್ರೂಪ್ ಗಳಲ್ಲಿ ಬೆಳಗ್ಗೆ 8.00 ಗಂಟೆಗೆ ತಾವು ತಿಳಿಸಿದ ಸ್ಥಳದಲ್ಲಿ Darpan Device, Bio Metric device ನೊಂದಿಗೆ ಹಾಜರಿರಬೇಕು ಎಂದು. ಬೆಳಗ್ಗೆ 8.00 ಗಂಟೆಗೆ System Update ಆಗುತ್ತೆ ಎಂದು ಅವಸರವಸರವಾಗಿ ಅರ್ಧಂಬರ್ಧ ಹೊಟ್ಟೆಗೆ ಹಾಕಿ ಕೊನೆಗೂ SO ಗಳಿಗೆ ತಲುಪಿದೆವು. ಅಲ್ಲಿ ನೋಡಿದರೆ ಕತೆಯೇ ಬೇರೆ …
8.00 ಗಂಟೆ ಎಂದದ್ದು 9.30 ದಾಟಿತು ಇನ್ನೂ ಅಪ್ಡೇಟ್ ಆಗುತ್ತಿಲ್ಲ, ಮತ್ತೆ ಸ್ವಲ್ಪ ಸಮಯದ ನಂತರ ಒಂದೊಂದೇ device update ಆಗತೊಡಗಿತು.
ಪಾಪ ಕೆಲವರಿದ್ದಂತೂ ಏನೇ ಮಾಡಿದರೂ ಅಪ್ಡೇಟ್ ಆಗ್ತಿಲ್ಲ.. ಒಮ್ಮೆ restart ಮಾಡೋದು, WIFI Connect ಮಾಡೊದು, ಪರದಾಟ ಕೊನೆಗಾಣುತ್ತಿಲ್ಲ.
Network ಸಮಸ್ಯೆ ಎಂದು ಮೂಡಬಿದ್ರಿ SO ಹೊರಗೆಲ್ಲ ಸುತ್ತಾಡಿದ್ದಾಯ್ತು, ಗಂಟೆ 1.00 ಇನ್ನೂ ಅರ್ಧದಷ್ಟು ಅಪ್ಡೇಟ್ ಬಾಕಿ ಇತ್ತು ಒಂದು ಕಡೆ ದೇವರಿಗೆ ಕೈ ಮುಗಿಯೋದು, ನಮ್ಮ ASP ಸರ್ ಅಂತೂ ಪೂರ್ತಿ device ಅನ್ನೇ ಸ್ಥಳಾಂತರಿಸಿದ್ರು, ಒಬ್ಬರ ಕೈನಿಂದ ಮತ್ತೊಬ್ಬರ ಕೈಗೆ ಇಟ್ಟು ಆವರ ಕೈ ಗುಣದಿಂದ ಆದ್ರೂ ಅಪ್ಡೇಟ್ ಆಗಬಹುದೆಂಬ ನಂಬಿಕೆ. ಇಲಾಖೆಯು ಅಧಿಕಾರಿ ಯೊಬ್ಬರ ಮಗುವಿನ ಕೈಗೂ ದರ್ಪಣ್ ಡಿವೈಸ್ ಅನ್ನು ಕೊಟ್ಟೂ ಆಯ್ತೂ ಆದ್ರೂ ಅಪ್ಡೇಟ್ ಆಗುತ್ತಿಲ್ಲ, ಪಾಪ ಕೆಲವು BPM ಗಳಂತೂ ಹರಕೆ ಕೂಡ ಹೊತ್ತು ಕೊಂಡಿರಬಹುದು!!! ಎಲ್ಲಾರೂ ಒಟ್ಟು ಸೇರಿದ್ದೇವೆ ಅನ್ನೋ ಖುಷಿ ಒಂದೆಡೆಯಾದರೆ,ಅಯ್ಯೋ ನನ್ನ ಡಿವೈಸ್ ಯಾಕ್ ಅಪ್ಡೇಟ್ ಆಗಿಲ್ಲ ಅನ್ನೋ ಮೇಡಂ ಗಳು, ಎನ್ನ ಒಂಜಿ ಮಲ್ತ್ ಕೋರ್ಲೆ ಅನ್ನೋ ಸರ್ ಗಳು ಮಗದೊಂದೆಡೆ .ಕೊನೆಗೂ ಸಂಜೆ 4.30. ಕ್ಕೆ ನಮ್ಮ ವಿಭಾಗದ ಎಲ್ಲಾ ಶಾಖಾ ಅಂಚೆ ಕಚೇರಿಯ ಎಲ್ಲಾ ಡಿವೈಸ್ ಗಳ ಅಪ್ಡೇಟ್ ಯಶಸ್ವಿಯಾಗಿ ನಡೆಯಿತು..

ಹೊಸ ತಂತ್ರಜ್ಞಾನದ ದಾರಿಯಲಿ ಹೊಸತನದ ಕವಲುಗಳನು ಭೇದಿಸುತ್ತಾ ಮತ್ತಷ್ಟು ಜನಸೇವೆಯ ಒದಗಿಸುತ್ತಾ ಸಾಗಬೇಕಿದೆ ಭಾರತೀಯ ಅಂಚೆ ಇಲಾಖೆ ❤️

Leave a Comment