ಪುತ್ತೂರು: ಅಂಚೆ ಇಲಾಖೆ ಈಗಾಗಲೇ ಆಧುನಿಕತೆಯ ಹಾದಿಯಲ್ಲಿ ಸ್ಫರ್ಧಾತ್ಮಕವಾಗಿ ಬೆಳೆಯುತ್ತಿದೆ. ಅದರಲ್ಲೂ ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾ ಅಂಚೆ ಕಛೇರಿಗಳು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡು, ಜನರಿಗೆ ಕ್ಷಿಪ್ರ ಸೇವೆಯನ್ನು ಒದಗಿಸುತ್ತಿದೆ. ಆದರೆ ಇದೀಗ ಶಾಖಾ ಅಂಚೆ ಕಚೇರಿಯ ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ತರ ಬದಲಾವಣೆಯಾಗುತ್ತಿದ್ದು, ಹೊಸ ತಂತ್ರಾಂಶವೊಂದನ್ನು ಇದು ಅಳವಡಿಸಿಕೊಳ್ಳಲಿದೆ. ಈ ಸಂಬಂಧ ಏಪ್ರಿಲ್ 16.04.2024 ರಿಂದ 18.04.2024 ರವರೆಗೆ ಶಾಖಾ ಅಂಚೆ ಕಛೇರಿಗಳಲ್ಲಿ ಯಾವುದೇ ಸೇವೆಗಳು ಲಭ್ಯವಿಲ್ಲದಿರುವುದರಿಂದ ಗ್ರಾಹಕರು ಸಹರಿಸುವಂತೆ ಪುತ್ತೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.