ಪೋಸ್ಟಲ್ ಪಿನ್‌ ಕೋಡ್‌ ಗೆ ಈಗ 50 ವರ್ಷದ ಸ್ವರ್ಣ ಸಂಭ್ರಮ

ಭಾರತೀಯ ಅಂಚೆ ಇಲಾಖೆಯು ತ್ವರಿತ ಪತ್ರ ಬಟವಾಡೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಬಟವಾಡೆ ಮಾಡುವ ಅಂಚೆ ಕಛೇರಿಗೆ ಅದರದ್ದೇ ಆದ ಗುರುತಿನ ಸಂಖ್ಯೆಯನ್ನು ನೀಡುವುದರ ಮೂಲಕ ಪತ್ರ ಬಟವಾಡೆ ಸೇವೆಯನ್ನು ಸುಲಭಗೊಳಿಸಿದೆ. ಆ ಮೂಲಕ ಇಂತಹ ಗುರುತಿನ ಸಂಖ್ಯೆಯನ್ನು “ಪಿನ್ ಕೋಡ್” ಎಂದು ಹೆಸರಿಸಲಾಯಿತು.

PINCODE pressnote

ಕೇಂದ್ರ ಸಂಪರ್ಕ ಇಲಾಖೆಯ ಅಪರ ಕಾರ್ಯದರ್ಶಿಯಾಗಿದ್ದ ಶ್ರೀ. ಶ್ರೀರಾಮ್ ಬಿಕಾಜಿ ವೇಲಂಕರ್ ಇವರು ಆಗಸ್ಟ್ 15, 1972 ರಂದು ಪಿನ್ ಕೋಡ್ ಸೇವೆಯನ್ನು ಆರಂಭಿಸಿದರು. ಪಿನ್ ಕೋಡ್ ನ ವಿಸ್ತೃತ ರೂಪ – “ಪೋಸ್ಟಲ್ ಇಂಡೆಕ್ಸ್ ನಂಬರ್”. ಪಿನ್ ಕೋಡ್ ಆರು ಅಂಕೆಗಳಿಂದ ಕೂಡಿದ್ದು, ಇವುಗಳಲ್ಲಿ ಮೊದಲಿನ ಅಂಕೆಯು ಪೋಸ್ಟಲ್ ಝೋನ್ , ಎರಡನೆ ಅಂಕೆಯು ಪೋಸ್ಟಲ್ ಸಬ್ ಝೋನ್ , ಮೂರನೇ ಅಂಕೆಯು ಸಾರ್ಟಿಂಗ್ ಡಿಸ್ಟ್ರಿಕ್ಟ್, ಕೊನೆಯ ಮೂರು ಅಂಕೆಗಳು ಸಾರ್ಟಿಂಗ್ ಡಿಸ್ಟ್ರಿಕ್ಟ್ ನ ಅಡಿಯಲ್ಲಿ ಬರುವ ಬಟವಾಡೆ ಅಂಚೆ ಕಚೇರಿಯನ್ನು ಸೂಚಿಸುತ್ತದೆ.

ಈ ಪಿನ್ ಕೋಡ್ ನ ಆಧಾರದಲ್ಲಿ ರವಾನಿಸಲ್ಪಡುವ ಪತ್ರಗಳು ವಿಂಗಡನೆಯಾಗಿ ಗಮ್ಯ ಅಂಚೆ ಕಛೇರಿಗಳನ್ನು ತ್ವರಿತವಾಗಿ ತಲುಪುವುದು. ಪ್ರಸ್ತುತ ಈ ಪಿನ್ ಕೋಡ್ ಅನ್ನು ಎಲ್ಲಾ ರೀತಿಯ ಅಂಚೆ ಸೇವಯಲ್ಲೂ ಅಗತ್ಯವಾಗಿ ಬಳಸಲಾಗುತ್ತಿದೆ. ಇಂದಿಗೆ ಪಿನ್ ಕೋಡ್ ಸೇವೆಯನ್ನು ಅಂಚೆ ಇಲಾಖೆಯಲ್ಲಿ ಆರಂಭಿಸಿ 50 ವರ್ಷಗಳು ಸಂದವು.

ಪ್ರತಿ ಅಂಚೆ ಕಛೇರಿಯ ಪಿನ್ ಕೋಡ್ ನ ಮಾಹಿತಿಯು ಇಂಡಿಯಾ ಪೋಸ್ಟ್ ವೆಬ್ ಸೈಟ್ (www.indiapost.gov.in) ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ಉಪಯೋಗಿಸುವಂತೆ ಕೋರಲಾಗಿದೆ.

Leave a Comment