ನವೆಂಬರ್ 1, ಕನ್ನಡ ರಾಜ್ಯೊತ್ಸವದ ಶುಭ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಶ್ರೀ. ಕ್ಷೇತ್ರ ಹೊಂಬುಜ ಜೈನ್ ಮಠ, ಹೊಂಬುಜ ವರಂಗ ಇವರ ಸಹಯೋಗದೊಂದಿಗೆ, ಐತಿಹಾಸಿಕ ಸ್ಥಳ ಹಾಗೂ ಜೈನ ಮತದ ವೈಭವನ್ನು ಸಾರುವ ಪಿಕ್ಚರ್ ಪೋಸ್ಟ್ ಕಾರ್ಡ್ ಗಳನ್ನು ವರಂಗ ಕೆರೆ ಬಸದಿಯ ಆವರಣದಲ್ಲಿ ಡಾ. ಏಂಜಲ್ ರಾಜ್ (ಐ.ಪಿ.ಒ.ಎಸ್) ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ಇವರು ಬಿಡುಗಡೆಗೊಳಿಸಿದರು. ಈ ಸುಂದರ ಸಮಾರಂಭದಲ್ಲಿ ಪೂಜ್ಯರಾದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳು, ಹೊಂಬುಜ ಜೈನ ಮಠ ಹುಂಚ ಇವರು ಆಶಿರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಪ್ರೊ. ಎಸ್. ಪಿ. ಅಜಿತ ಪ್ರಸಾದ್,ಜೈನ ವಿದ್ವಾನ್, ಮೂಡಬಿದ್ರೆ, ಪ್ರೊ. ಮುನಿರಾಜ್ ರೆಂಜಾಳ ಜೈನ ವಿದ್ವಾನ್, ರೆಂಜಾಳ, ಶ್ರೀ. ಪಾರ್ಶ್ವನಾಥ ನೆರೆಂಕಿ, ಉಪಾಧ್ಯಕ್ಷಕರು, ಮಾಂಡವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರು, ಶ್ರೀ. ಮಹಾವೀರ್ ಕುಂದೂರ್, ಅಧ್ಯಕ್ಷರು, ಸಂಸ್ಕಾರ ಸಿ.ಬಿ.ಎಸ್.ಸಿ. ಸ್ಕೂಲ್ ಹುಬ್ಬಳ್ಳಿ ಇವರು ಭಾಗವಹಿಸಿದ್ದರು. ಪುತ್ತೂರು ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕರಾಗಿರುವ ಶ್ರೀಯುತ ಜೋಸೆಫ್ ರಾಡ್ರಿಗಸ್, ಕಾರ್ಕಳ ಉಪ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕರಾಗಿರುವ ಶ್ರೀಯುತ ಚಂದ್ರಾ ನಾಯ್ಕ್ ಮತ್ತು ಪುತ್ತೂರು ವಿಭಾಗದ ಮಾರ್ಕೆಟಿಂಗ್ ಎಕ್ಸೆಕ್ಯೂಟೀವ್ ಶ್ರೀಯುತ ಗುರುಪ್ರಸಾದ್ ಕೆ. ಎಸ್. ಇವರು ಉಪಸ್ಥಿತರಿದ್ದರು.
ಶ್ರೀ ಮಹಾವೀರ್ ಕುಂದೂರ್, ಅಧ್ಯಕ್ಷರು, ಸಂಸ್ಕಾರ ಸಿ.ಬಿ.ಎಸ್.ಸಿ. ಸ್ಕೂಲ್ ಹುಬ್ಬಳ್ಳಿ ಇವರು ವಿಶೇಷ ಮುತುವರ್ಜಿ ವಹಿಸಿ, ಈ ಸ್ಮರಣೀಯ ಕಾರ್ಯಕ್ರಮಕ್ಕೆ ಶೋಭೆಯನ್ನು ನೀಡಿ, ಸಂಪೂರ್ಣ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ.
ಹತ್ತು ವಿವಿಧ ಜೈನ ಕ್ಷೇತ್ರಗಳ ಚಿತ್ರಗಳುಳ್ಳ ಅಂಚೆ ಪೋಸ್ಟ್ ಕಾರ್ಡ್ ನಲ್ಲಿ ಮುದ್ರಿತವಾದ ವಿಶೇಷ ಕಾರ್ಡನ್ನು ಈ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಐತಿಹಾಸಿಕ ಸ್ಥಳಗಳು ಜೈನರ ಗತ ವೈಭವವನ್ನು ಪ್ರಸಕ್ತ ಜನಾಂಗಕ್ಕೆ ಸಾರುವಂತಹುದಾಗಿದೆ. ಪ್ರಸ್ತುತ ಬಿಡುಗಡೆಗೊಳ್ಳಲ್ಪಟ್ಟ ಹತ್ತು ಕಾರ್ಡ್ ಗಳಲ್ಲಿ ಆರು ವಿಧದ ಕಾರ್ಡುಗಳು ಪುತ್ತೂರು ವಿಭಾಗದ ಅಡಿಯಲ್ಲಿ ಬರುವ ವಿವಿಧ ಜೈನ ಕ್ಷೇತ್ರಗಳ ಚಿತ್ರವನ್ನು ಹೊಂದಿದ್ದು ನವೆಂಬರ್ 1 ರಂದು ಅವುಗಳನ್ನು ಫ್ರಾಂಕಿಂಗ್ ಮಾಡುವ ಮೂಲಕ ವಿಕ್ರಯ ಯೋಗ್ಯವನ್ನಾಗಿ ಮಾಡಲಾಯಿತು.