ಮೂಡುಬಿದಿರೆಯಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿಯ ಅಭಿಯಾನ | ಒಂದೇ ಸೂರಿನಡಿಯಲ್ಲಿ ಅಂಚೆ ಇಲಾಖೆಯ ಎಲ್ಲಾ ರೀತಿಯ ಸೇವಾ ಸೌಲಭ್ಯಗಳು ಲಭ್ಯ

ಪವರ್ ಫ್ರೆಂಡ್ಸ್ ಬೆದ್ರ
ಸಮಾಜ ಮಂದಿರ ಮೂಡುಬಿದಿರೆ ಇವರ ಆಶ್ರಯದಲ್ಲಿ
ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ, ಮತ್ತು
ತಾಲೂಕು ಆರೋಗ್ಯ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿ
ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ
ಹಾಗೂ
ಮಧುಮೇಹ ಮತ್ತು ರಕ್ತದೊತ್ತಡ ಇದರ ಉಚಿತ ತಪಾಸಣೆ

ದಿನಾಂಕ 23-09-2022 ಶುಕ್ರವಾರದಿಂದ 25-09-2022 ರವಿವಾರದವರೆಗೆ
ಸಮಯ ಪೂರ್ವಾಹ್ನ 9.00 ಗಂಟೆಯಿಂದ ಸಂಜೆ 5 ಗಂಟೆಯವರೆಗೆ
ಸ್ಥಳ ಸ್ವರ್ಣ ಮಂದಿರ,
ಮೂಡುಬಿದಿರೆ.

ಆಧಾರ್ ನೋಂದಣಿ ಹಾಗೂ ತಿದ್ದುಪಡಿಯ ಶಿಬಿರದಲ್ಲಿ ಮಾಡಿಕೊಡಲಾಗುವ ಇತರ ಸೇವೆಗಳು:-

 • ಹೊಸ ಪಾನ್ ಕಾರ್ಡ್
 • ಹೊಸ ಪಾಸ್ ಪೋರ್ಟ್ ಮತ್ತು ಪಾಸ್ ಪೋರ್ಟ್ ನವೀಕರಣ (ರಿನಿವಲ್)
 • ಇ ಶ್ರಮ್ ಕಾರ್ಡ್
 • ಆಯುಷ್ಮಾನ್ ಕಾರ್ಡ್/ ಅಭಾ ಕಾರ್ಡ್
 • ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಜೋಡಣೆ
 • ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಕಾರ್ಡ್ ಜೋಡಣೆ
 • ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳು, ಅಂಚೆ ಜೀವ ವಿಮೆ,ಮಕ್ಕಳ ಸ್ಕಾಲರ್ ಶಿಪ್ ಅಕೌಂಟ್, ಪಿಂಚಣಿ ಅಕೌಂಟ್ , ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಅಕೌಂಟ್ , ಜನಸುರಕ್ಷಾ ಯೋಜನೆಗಳು, ಅಪಘಾತ ವಿಮೆ .
  ಇನ್ನಿತರ ಎಲ್ಲಾ ರೀತಿಯ ಸಿ.ಎಸ್.ಸಿ ಸೇವೆಗಳು ಲಭ್ಯವಿದೆ,

ಸಾರ್ವಜನಿಕರು ಅತಿ ಸುಲಭ ರೀತಿಯಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು 12 ಆಧಾರ್ ಕೌಂಟರ್ ಗಳು ಮತ್ತು 5 ಇತರ ಸೇವಾ ಸೌಲಭ್ಯಗಳ ಕೌಂಟರ್ ಗಳನ್ನು , ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು, ಹೆಚ್ಚಿನ ಜನರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸುತ್ತೇವೆ,
ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಾಡುವವರಿಗೆ ಮಾತ್ರ ಟೋಕನ್ ವ್ಯವಸ್ಥೆ ಇರುತ್ತದೆ, ಉಳಿದ ಸೇವೆಗಳಿಗೆ ಟೋಕನ್ ಇಲ್ಲದೆಯೇ ಸರಕಾರದ ಸೇವಾ ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳಬಹುದು,
ಈಗಾಗಲೇ ದಿನಾಂಕ 17-09-2022 ರಿಂದ ಸಮಾಜ ಮಂದಿರ ಮೂಡುಬಿದಿರೆ ಇದರ ಕಛೇರಿಯಲ್ಲಿ ಟೋಕನ್ ನೀಡಲಾಗುತ್ತಿದೆ, ಅಥವಾ
ದೂರವಾಣಿ ಮೂಲಕ ಸಂಪರ್ಕಿಸಿ ಟೋಕನ್ ಮತ್ತು ಮಾಹಿತಿಯನ್ನು ಪಡೆದುಕೊಳ್ಳಬಹುದು,
ಸಂಪರ್ಕಕ್ಕಾಗಿ:-

 • 9731316023
 • 8310825088
 • 9611436514

ಸರ್ವರಿಗೂ ಆದರ ಸ್ವಾಗತ ಬಯಸುವ

ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
ಪವರ್ ಫ್ರೆಂಡ್ಸ್ ಬೆದ್ರ

20220920 074612
IMG 20220916 WA0002
IMG 20220916 WA0004 1

Leave a Comment