ಭಾರತೀಯ ಅಂಚೆ ಇಲಾಖೆ
ಅಂಚೆ ಅದಾಲತ್
ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ದಿನಾಂಕ 07.09.2022 ರಂದು 11.00 a.m. ಗೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ.
ಈ ಅದಾಲತ್ತಿನಲ್ಲಿ ಪುತ್ತೂರು , ಕಡಬ , ಸುಳ್ಯ ,ಬಂಟ್ವಾಳ , ಮೂಡಬಿದ್ರೆ , ಬೆಳ್ತಂಗಡಿ , ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು , ತಕರಾರುಗಳನ್ನು ಪರಿಶೀಲಿಸಲಾಗುವುದು.
ಸಾರ್ವಜನಿಕರು ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರಮುಖೇನ , ಅಂಚೆ ಅದಾಲತ್ ತಲೆಬರಹದಡಿ 07.09.2022 ರೊಳಗೆ ಹಿರಿಯ ಅಂಚೆ ಅಧೀಕ್ಷಕರು , ಪುತ್ತೂರು ವಿಭಾಗ , ಪುತ್ತೂರು -574201, ವಿಳಾಸಕ್ಕೆ ದೂರುಗಳನ್ನು ಕಳುಹಿಸಬಹುದು , ಹಾಗೆಯೇ ಅದೇ ದಿನ ಗಂಟೆ 11.00 ರ ಒಳಗೆ ದೂರವಾಣಿ ಸಂಖ್ಯೆ 08251-230201,230295 ಕ್ಕೆ ನೇರವಾಗಿಯೂ ಸಂಪರ್ಕಿಸಬಹುದು. ತಮ್ಮ ದೂರುಗಳನ್ನು ಮಿಂಚಂಚೆ doputtur.ka@indiapost.gov.in ಮೂಲಕ ಕಳುಹಿಸಬಹುದು. ಪುತ್ತೂರು ಅಂಚೆ ವಿಭಾಗಕ್ಕೆ ಸಂಬಂಧಿಸಿದ ದೂರುಗಳನ್ನು ಮಾತ್ರ ಪರಿಗಣಿಸಲಾಗುವುದು.